ವಂಚನೆ ಪ್ರಕರಣ: ಆರೋಪಿಗೆ 13,275 ವರ್ಷ ಶಿಕ್ಷೆ ವಿಧಿಸಿದ ಥಾಯ್ ಲ್ಯಾಂಡ್ ನ್ಯಾಯಾಲಯ

ಥಾಯ್ ಲ್ಯಾಂಡಿನ ನ್ಯಾಯಾಲಯ ಒಂದು ಓರ್ವ ವಂಚಕನಿಗೆ ಒಟ್ಟು 13,275 ವರ್ಷಗಳ ಜೈಲು ಶಿಕ್ಷೆಗೆ ನೀಡಿ ತೀರ್ಪು ಪ್ರಕಟಿಸಿದೆ ಎಂದು ಮಾದ್ಯಮದಲ್ಲಿ ವರದಿಯಾಗಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬ್ಯಾಂಕಾಂಕ್: ಥಾಯ್ ಲ್ಯಾಂಡಿನ ನ್ಯಾಯಾಲಯ ಒಂದು ಓರ್ವ ವಂಚಕನಿಗೆ ಒಟ್ಟು 13,275 ವರ್ಷಗಳ ಜೈಲು ಶಿಕ್ಷೆಗೆ ನೀಡಿ ತೀರ್ಪು ಪ್ರಕಟಿಸಿದೆ ಎಂದು ಮಾದ್ಯಮದಲ್ಲಿ ವರದಿಯಾಗಿದೆ
ತಾನು ಲಾಭ ಗಳಿಸುವ ಉದ್ದೇಶದಿಂದ ನಕಲಿ ಸ್ಕೀಮ್ ಒಂದನ್ನು ಪ್ರಾರಂಭಿಸಿದ್ದ 34, ವರ್ಷದ ಪುದಿತ್ ಕಿತ್ತಿತ್ತದಿಲೋಕ್ ಎನ್ನುವಾತನೇ ಶಿಕ್ಷೆಗೊಳಗಾದ ಅಪರಾಧಿ. 
 ಈತನು ತನ್ನ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರೆ ಲಕ್ಷಾಂತರ ರೂ. ಲಾಭ ಗಳಿಸಬಹುದೆಂದು ಆಸೆ ಹುಟ್ಟಿಸಿದ್ದ. ಒಟ್ಟಾರೆ 40 ಸಾವಿರ ಜನರಿಗೆ ವಂಚಿಸಿದ್ದ ಈತ ಅವರಿಂದ 160 ಮಿಲಿಯನ್ ಡಾಲರ್ ಹಣ ಸಂಗ್ರಹಿಸಿದ್ದನು. 
ಪುದಿತ್ ಅಕ್ರಮವಾಗಿ ಜನರಿಗೆ ಸಾಲಗಳನ್ನು ನೀಡಿದ್ದನು. ಇದಾಗಲೇ 2,653 ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನುವುದನ್ನು ನ್ಯಾಯಾಲಯ ಪತ್ತೆಹಚ್ಚಿದೆ. ಇದೀಗ ಆರೋಪಿ ತಾನೇ ತಾನಾಗಿ ತಪ್ಪನ್ನು ಒಪ್ಪಿಕೊಂಡಿದ್ದು ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ತಪ್ಪು ಒಪ್ಪಿಕೊಂಡ ಕಾರಣ ಆರೋಪಿಗೆ ನ್ಯಾಯಾಲಯವು  ಈ ಮೊದಲು ವಿಧಿಸಿದ್ದ 13,275 ವರ್ಷಗಳ ಶಿಕ್ಷೆಯನ್ನು 6,637 ವರ್ಷ, ಆರು ತಿಂಗಳುಗಳಿಗೆ ಕಡಿತಗೊಳಿಸಿದೆ.
ಆರೋಪಿಯು ದೇಶದ ವಿವಿಧೆಡೆ ವಿಚಾರಸಂಕೀರ್ಣಗಳನ್ನು ಆಯೋಜಿಸಿ ತನ್ನ ಸಂಸ್ಥೆಯಲ್ಲಿ ಹಣ ಹೂಡಲು ಜನರಿಗೆ ಪ್ರೇರಿಸುತ್ತಿದ್ದ. ಯಾರೊಬ್ಬರು ಹೊಸ ಸದಸ್ಯರನ್ನು ಮಾಡಿದ್ದರೆ ಇನ್ನು ಹೆಚ್ಚು ಲಾಭ ಗಳಿಸಬಹುದೆಂದು ಆಮಿಷ ಒಡ್ಡುತ್ತಿದ್ದ ಎನ್ನಲಾಗಿದೆ. ಈತನನ್ನು ಇದೇ ಆಗಸ್ಟ್ ನಲ್ಲಿ ಥಾಯ್ ಪೋಲೀಸರು ಬಂಧಿಸಿದ್ದು ಅಂದಿನಿಂದ ಅವನನ್ನು ಬ್ಯಾಂಕಾಕ್ ನ ರಿಮಾಂಡ್ ಜೈಲಿನಲ್ಲಿರಿಸಲಾಗಿತ್ತು.
ಇದೀಗ ನ್ಯಾಯಾಲಯವು ಈತನ ಎರಡು ಸಂಸ್ಥೆಗಳ ಮೇಲೆ ತಲಾ 20 ಮಿಲಿಯನ್ ಡಾಲರ್ ದಂದ ವಿಧಿಸಿದೆ, ಇದಾಗಲೇ ಈತನಿಂದ ವಂಚನೆಗೆ ಒಲಗಾದವರೆಂದು ಗುರುತಿಸಲಾದ 2653 ಜನರಿಗೆ 7.5 ವಾರ್ಷಿಕ ಬಡ್ಡಿಯೊಡನೆ 17 ಮಿಲಿಯನ್ ಡಾಲರ್ ಹಣ ಹಿಂದಿರುಗಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com