ಪ್ರವಾಸಿ ವೀಸಾ ನಿಷೇಧ, ಟ್ರಂಪ್ ಆದೇಶ ಮರುಜಾರಿಗೆ ಕೋರ್ಟ್ ನಕಾರ

ಕೆಲವು ಪ್ರವಾಸಿಗಳು ಮತ್ತು ಎಲ್ಲ ವಲಸೆಗಾರರ ಪ್ರವಾಸವನ್ನು ನಿಷೇಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹೊರಡಿಸಿದ್ದ...
ನಿಷೇಧದ ವಿರುದ್ಧ ಪ್ರತಿಭಟನೆ
ನಿಷೇಧದ ವಿರುದ್ಧ ಪ್ರತಿಭಟನೆ
ಸ್ಯಾನ್ ಫ್ರಾನ್ಸಿಸ್ಕೊ: ಕೆಲವು ಪ್ರವಾಸಿಗಳು ಮತ್ತು ಎಲ್ಲ ವಲಸೆಗಾರರ ಪ್ರವಾಸವನ್ನು ನಿಷೇಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹೊರಡಿಸಿದ್ದ ಆದೇಶವನ್ನು ತಕ್ಷಣ ಮರುಜಾರಿಗೊಳಿಸುವಂತೆ ನ್ಯಾಯಾಂಗ ಇಲಾಖೆ ಮಾಡಿದ್ದ ಮನವಿಯನ್ನು ಪುರಸ್ಕರಿಸಲು ಅಮೆರಿಕದ ಫೆಡರಲ್ ಮೇಲ್ಮನವಿ ನ್ಯಾಯಾಲಯ ನಿರಾಕರಿಸಿದೆ.
ಸ್ಯಾನ್ ಫ್ರಾನ್ಸಿಸ್ಕೊದ 9ನೇ ಅಮೆರಿಕ ರ್ಸಟ್ ಕೋರ್ಟ್ ಆಫ್ ಆಪೀಲ್ಸ್, ಟ್ರಂಪ್ ಆದೇಶಕ್ಕೆ ನೀಡಲಾದ ತಡೆಯಾಜ್ಞೆಯನ್ನು ತೆರವುಗೊಳಿಸುವ ಬದಲಿಗೆ ಸೋಮವಾರ ಮಧ್ಯಾಹ್ನ ಇನ್ನಷ್ಟು ವಾದಮಂಡನೆ ಮಾಡುವಂತೆ ನಿರ್ದೇಶನ ನೀಡಿದೆ.
ಅಮೆರಿಕಾದ್ಯಂತ ತೀವ್ರ ಟೀಕೆಗೆ ಗುರಿಯಾಗಿರುವ ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಪ್ರವಾಸಿ ವೀಸಾ ನಿರ್ಬಂಧ ವಿಧಿಸುವ ಆದೇಶಕ್ಕೆ ಫೆಡರಲ್ ನ್ಯಾಯಾಧೀಶರು ತಾತ್ಕಾಲಿಕ ತಡೆ ನೀಡಿದ್ದರು. ಬಳಿಕ ಟ್ರಂಪ್ ಆಡಳಿತ ನ್ಯಾಯಾಲಯ ವಿಧಿಸಿದ್ದ ತಾತ್ಕಾಲಿಕ ನಿಷೇಧವನ್ನು ತೆರವುಗೊಳಿಸುವಂತೆ ಮನವಿ ಮಾಡಿತ್ತು.
ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ನಿಷೇಧ ಎಂದು ಟ್ರಂಪ್ ಹೇಳಿದರೂ ಕೂಡ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಇರಾಕ್, ಇರಾನ್, ಸುಡಾನ್, ಲಿಬಿಯಾ, ಯೆಮೆನ್ ಮತ್ತು ಸೊಮಾಲಿಯಾ ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com