ಟ್ರಂಪ್ ವೀಸಾ ನಿಷೇಧ ನಿಯಮಕ್ಕೆ ತಡೆಯೊಡ್ಡುವಂತೆ ಅಮೆರಿಕ ನ್ಯಾಯ ಇಲಾಖೆ ನ್ಯಾಯಾಧೀಶರಿಗೆ ಮನವಿ

ಏಳು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಪ್ರಯಾಣ ವೀಸಾಕ್ಕೆ ನಿಷೇಧ ಹೇರುವ ಡೊನಾಲ್ಡ್ ಟ್ರಂಪ್...
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಏಳು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಪ್ರಯಾಣ ವೀಸಾಕ್ಕೆ ನಿಷೇಧ ಹೇರುವ ಡೊನಾಲ್ಡ್ ಟ್ರಂಪ್ ಅವರ ಕಾರ್ಯಕಾರಿ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಬೇಕೆಂದು ಅಮೆರಿಕ ನ್ಯಾಯ ಇಲಾಖೆ ಕೋರಿದೆ. 
ವಾರದ ಹಿಂದೆ ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಲಸೆ ಆದೇಶವನ್ನು ಪ್ರಕಟಿಸಿದ ನಂತರ ಸಿಕ್ಕಿದ ನಾಟಕೀಯ ತಿರುವು ಇದಾಗಿದೆ.
ಅಮೆರಿಕಾದ್ಯಂತ ತೀವ್ರ ಟೀಕೆಗೆ ಗುರಿಯಾಗಿರುವ ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಪ್ರಯಾಣ ವೀಸಾ ನಿರ್ಬಂಧ ವಿಧಿಸುವ ಆದೇಶಕ್ಕೆ  ವಾಷಿಂಗ್ಟನ್ ನ ಫೆಡರಲ್ ನ್ಯಾಯಾಧೀಶರು ತಾತ್ಕಾಲಿಕ ತಡೆ ನೀಡಿದ್ದರು.
ಲಂಡನ್, ಪ್ಯಾರಿಸ್ ಮತ್ತು ವಾಷಿಂಗ್ಟನ್ ನ ಸಾವಿರಾರು ಮಂದಿ ಟ್ರಂಪ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. 
ಚುನಾವಣಾ ಪ್ರಚಾರದುದ್ದಕ್ಕೂ ಮುಸ್ಲಿಂ ರಾಷ್ಟ್ರಗಳಿಗೆ ವಲಸೆ ನೀತಿಗೆ ನಿರ್ಬಂಧ ಹೇರುವುದಾಗಿ ಹೇಳುತ್ತಾ ಅಧಿಕಾರಕ್ಕೆ ಬಂದ ಡೊನಾಲ್ಡ್ ಟ್ರಂಪ್ ಅವರಿಗೆ ಇದರಿಂದ ತಾತ್ಕಾಲಿಕ ಹಿನ್ನಡೆ ಸಿಕ್ಕಿದೆ.

ಅಮೆರಿಕ ಫೆಡರಲ್ ಜಡ್ಜ್ ಆದೇಶಕ್ಕೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ಟ್ರಂಪ್, ನ್ಯಾಯಾಧೀಶರ ನಿರ್ಧಾರವು ಹಾಸ್ಯಾಸ್ಪದವಾಗಿದ್ದು, ಇದರಿಂದ ಕಾನೂನು ಜಾರಿಗೆ ತೊಡಕಾಗಲಿದೆ. ಮುಸ್ಲಿಂ ರಾಷ್ಟ್ರಗಳಿಂದ ಅಪಾಯಕಾರಿ ಜನರು ಅಮೆರಿಕಾದೊಳಗೆ ಪ್ರವೇಶಿಸುವ ಸಾಧ್ಯತೆಯಿದೆ. ಈ ಕಾನೂನನ್ನು ಅನೂರ್ಜಿತಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ನಿಷೇಧ ಎಂದು ಟ್ರಂಪ್ ಹೇಳಿದರೂ ಕೂಡ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಇರಾಕ್, ಇರಾನ್, ಸುಡಾನ್, ಲಿಬಿಯಾ, ಯೆಮೆನ್ ಮತ್ತು ಸೊಮಾಲಿಯಾ ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com