ಸೆನೆಟ್ ಉಪಾಧ್ಯಕ್ಷನಿಗೆ ವೀಸಾ ನಿರಾಕರಣೆ: ಅಮೆರಿಕಾಗೆ ಪಾಕಿಸ್ತಾನದಿಂದ ಬಹಿಷ್ಕಾರದ ಎಚ್ಚರಿಕೆ!

ಪಾಕಿಸ್ತಾನದ ಅತಿ ದೊಡ್ಡ ಇಸ್ಲಾಮಿಕ್ ಪಕ್ಷದ ನಾಯಕ, ಸೆನೆಟ್ ನ ಉಪಾಧ್ಯಕ್ಷರಿಗೆ ಅಮೆರಿಕಾ ವೀಸಾ ನಿರಾಕರಿಸಿರುವುದಕ್ಕೆ ಪಾಕಿಸ್ತಾನ ಕಿಡಿಕಾರಿದ್ದು, ಬಹಿಷ್ಕರಿಸುವ ಎಚ್ಚರಿಕೆ ನೀಡಿದೆ.
ಪಾಕಿಸ್ತಾನ ಸೆನೆಟ್ ಉಪಾಧ್ಯಕ್ಷ ಮೌಲಾನಾ ಅಬ್ದುಲ್ ಘಫೂರ್
ಪಾಕಿಸ್ತಾನ ಸೆನೆಟ್ ಉಪಾಧ್ಯಕ್ಷ ಮೌಲಾನಾ ಅಬ್ದುಲ್ ಘಫೂರ್
ಇಸ್ಲಾಮಾಬಾದ್: ಪಾಕಿಸ್ತಾನದ ಅತಿ ದೊಡ್ಡ ಇಸ್ಲಾಮಿಕ್ ಪಕ್ಷದ ನಾಯಕ, ಸೆನೆಟ್ ನ ಉಪಾಧ್ಯಕ್ಷರಿಗೆ ಅಮೆರಿಕಾ ವೀಸಾ ನಿರಾಕರಿಸಿರುವುದಕ್ಕೆ ಪಾಕಿಸ್ತಾನ ಕಿಡಿಕಾರಿದ್ದು, ಬಹಿಷ್ಕರಿಸುವ ಎಚ್ಚರಿಕೆ ನೀಡಿದೆ. 
ಅಮೆರಿಕಾದ ರಾಯಭಾರಿ ಕಚೇರಿ ಅಧಿಕಾರಿಗಳನ್ನು ಹಾಗೂ ಅಮೆರಿಕಾದ ಸಂಸದರನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನದ ಸಂಸದರು ಎಚ್ಚರಿಕೆ ನೀಡಿದ್ದು, ಅಮೆರಿಕಾದ ಯಾವುದೇ ಸರ್ಕಾರಿ ಪ್ರತಿನಿಧಿಯನ್ನು ಪಾಕಿಸ್ತಾನಕ್ಕೆ ಸ್ವಾಗತಿಸುವುದಿಲ್ಲ ಎಂದು ಹೇಳಿದ್ದಾರೆ. 
ಪಾಕಿಸ್ತಾನ ಸೆನೆಟ್ ಉಪಾಧ್ಯಕ್ಷ ಮೌಲಾನಾ ಅಬ್ದುಲ್ ಘಫೂರ್ ಗೆ ಅಮೆರಿಕಾ ವೀಸಾ ನಿರಾಕರಿಸಿರುವ ಹಿನ್ನೆಲೆಯಲ್ಲಿ ಸೆನೆಟ್ ನ ಅಧ್ಯಕ್ಷ ರಾಜಾ ರಬ್ಬಾನಿ, ಅಮೆರಿಕಾ ನಡೆಸುತ್ತಿರುವ ಇಂಟರ್ ಪಾರ್ಲಿಮೆಂಟರಿ(ಐಪಿಯು) ಯೂನಿಯನ್ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. ವೀಸಾ ವಿವಾದ ಬಗೆಹರಿಯುವವರೆಗೆ ಅಮೆರಿಕಾದ ಪ್ರತಿನಿಧಿಗಳನ್ನು ಸ್ವಾಗತಿಸುವುದಿಲ್ಲ. ಬಹಿಷ್ಕರಿಸುತ್ತೇವೆ ಎಂದು ಸೆನೆಟ್ ನ ಅಧ್ಯಕ್ಷ ರಾಜಾ ರಬ್ಬಾನಿ ಎಚ್ಚರಿಸಿದ್ದಾರೆ. 
ಪಾಕ್ ಸೆನೆಟ್ ನ ಉಪಾಧ್ಯಕ್ಷ ಮೌಲಾನಾ ಅಬ್ದುಲ್ ಘಫೂರ್ ಅಮೆರಿಕಾ ಆಯೋಜಿಸಿರುವ ಐಪಿಯು ಸಭೆಗೆ ತೆರಳಬೇಕಿತ್ತು. ಆದರೆ ಅಮೆರಿಕಾ ವೀಸಾ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿಲ್ಲ. ಸೆನೆಟ್ ಉಪಾಧ್ಯಕ್ಷರೊಂದಿಗೆ ತೆರಳಬೇಕಿದ್ದ ಮತ್ತೋರ್ವ ಸದಸ್ಯ ನಿವೃತ್ತ ಲೆಫ್ಟಿನೆಂಟ್ ಗೌರ್ನರ್ ಸಲಾಹುದ್ದೀನ್ ಗೆ ಅಮೆರಿಕಾ ವೀಸಾ ನೀಡಿದ್ದು ಎರಡು ದಿನಗಳ ಮುಂಚೆಯಷ್ಟೆ ವೀಸಾ ಕೈಸೇರಿದೆ. ಆದರೆ ಮೌಲಾನ ಅಬ್ದುಲ್ ಘಫೂರ್ ಗೆ ವೀಸಾ ಸಿಗದೇ ಇರಲು ತಾಂತ್ರಿಕ ಕಾರಣಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com