ವಾಷಿಂಗ್ಟನ್: ಭಯೋತ್ಪಾದನೆಯ ಬೆದರಿಕೆಯನ್ನು ವಿರೋಧಿಸಬೇಕು ಮತ್ತು ಮಟ್ಟಹಾಕಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಅಲ್ಲದೆ ತಮ್ಮ ಸರ್ಕಾರ ಈ ಗುರಿಯನ್ನು ಸಾಧಿಸಲಿದೆ ಎಂದು ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ವಾರದ ರೆಡಿಯೋ ಮತ್ತು ದೇಶವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಭಯೋತ್ಪಾದನೆಯನ್ನು ವಿರೋಧಿಸಬೇಕು ಮತ್ತು ಮಟ್ಟಹಾಕಬೇಕಾಗಿದ್ದು, ಅದನ್ನು ನಾವು ಖಂಡಿತ ಮಾಡುತ್ತೇವೆ ಎಂದಿದ್ದಾರೆ.
ಕಳೆದ ವಾರ ನಾನು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಹು ಅವರನ್ನು ಭೇಟಿ ಮಾಡಿದ್ದೆ ಮತ್ತು ಅವರಿಗೆ ಇಸ್ರೆಲ ಭದ್ರತೆಗೆ ಅಮೆರಿಕ ಬದ್ಧವಾಗಿದೆ. ನನ್ನ ಸ್ನೇಹಿತ ಪ್ರಧಾನಿ ಬೆಂಜಮಿನ್ ಅವರನ್ನು ವೈಟ್ ಹೌಸ್ ಗೆ ಸ್ವಾಗತಿಸಿದ್ದಕ್ಕೆ ಹೆಮ್ಮೆ ಇದೆ ಎಂದು ಟ್ರಂಪ್ ಹೇಳಿದ್ದಾರೆ.