ಪಾಕಿಸ್ತಾನ ಗಡಿಯೊಳಗೆ ಅನಧಿಕೃತವಾಗಿ ನುಸುಳುವವರಿಗೆ ಕಂಡಲ್ಲಿ ಗುಂಡು ಆದೇಶ
ತೊರ್ಕಾಮ್ ಮತ್ತು ಚಮನ್ ಪ್ರದೇಶಗಳಲ್ಲಿ ಪಾಕಿಸ್ತಾನ-ಆಫ್ಘಾನಿಸ್ಥಾನ ಗಡಿ ಮುಚ್ಚಿದ್ದು, ಪಾಕಿಸ್ತಾನಕ್ಕೆ ಅನಧಿಕೃತವಾಗಿ ನುಸುಳುವವರಿಗೆ ಕಂಡಲ್ಲಿ ಗುಂಡು ಹಾರಿಸುವ ಆದೇಶವನ್ನು ಅಧಿಕಾರಿಗಳು
ಇಸ್ಲಾಮಾಬಾದ್: ತೊರ್ಕಾಮ್ ಮತ್ತು ಚಮನ್ ಪ್ರದೇಶಗಳಲ್ಲಿ ಪಾಕಿಸ್ತಾನ-ಆಫ್ಘಾನಿಸ್ಥಾನ ಗಡಿ ಮುಚ್ಚಿದ್ದು, ಪಾಕಿಸ್ತಾನಕ್ಕೆ ಅನಧಿಕೃತವಾಗಿ ನುಸುಳುವವರಿಗೆ ಕಂಡಲ್ಲಿ ಗುಂಡು ಹಾರಿಸುವ ಆದೇಶವನ್ನು ಅಧಿಕಾರಿಗಳು ಹೊರಡಿಸಿದ್ದಾರೆ,
ಸಿಂಧ್ ಪ್ರಾಂತ್ಯದ ಲಾಲ್ ಶಾಬಾಜ್ ಕಲಂದರ್ ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ೯೦ ಜನ ಮೃತಪಟ್ಟು ೨೦೦ ಕ್ಕೂ ಹೆಚ್ಚು ಜನ ಗಾಯಗೊಂಡ ಹಿನ್ನಲೆಯಲ್ಲಿ ಭದ್ರತಾ ಕಾರಣಗಳಿಗಾಗಿ ಶುಕ್ರವಾರ ರಾತ್ರಿಯಿಂದ ಚಮನ್ ನಲ್ಲಿನ ಗೆಳೆತನದ ಗೇಟ್ ಅನ್ನು ಮುಚ್ಚಲಾಗಿದೆ.
ನಿರಂತರ ಎರಡನೇ ದಿನವೂ ಎರಡು ದೇಶಗಳ ನಡುವೆ ವಾಹನ ಓಡಾಟ ಮತ್ತು ವಸ್ತು ಸಾಗಾಣೆ ರದ್ದು ಮಾಡಲಾಗಿದೆ ಎಂದು ಡಾನ್ ಆನ್ಲೈನ್ ಪತ್ರಿಕೆ ವರದಿ ಮಾಡಿದೆ.
"ಗಡಿಯ ಯಾವುದೇ ಪ್ರದೇಶದಿಂದ ಅನಧಿಕೃತವಾಗಿ ಪಾಕಿಸ್ತಾನಕ್ಕೆ ನುಸುಳುವವರನ್ನು ಕಂಡಲ್ಲಿ ಗುಂಡು ಹೊಡೆದು ಹತ್ಯೆ ಮಾಡುವುದಕ್ಕೆ ಆದೇಶಿಸಾಲಾಗಿದೆ" ಎಂದು ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಅನಿರ್ಧಿಷ್ಟ ಕಾಲದವರೆಗೆ ಗೆಳೆತನದ ಗೇಟ್ ಅನ್ನು ಮುಚ್ಚಲಾಗಿದೆ" ಎಂದು ಫ್ರಾಂಟಿಯರ್ ಕಾರ್ಪ್ಸ್ ವಕ್ತಾರ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ನಡೆದ ಭಯೋತ್ಪಾದಕ ಘಟನೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಅಫ್ಘಾನಿಸ್ತಾನದ ಗಡಿಯ ವಾಷ್ ಮಂಡಿ ಪ್ರದೇಶದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಚಮನ್ ನಲ್ಲಿ ಕೂಡ ಮಾರಾಟಗಾರರು ಅಂಗಡಿಗಳನ್ನು ತೆರೆದಿಲ್ಲ.