ಟ್ರಂಪ್ ವಲಸೆ ನೀತಿಯಿಂದ 3 ಲಕ್ಷ ಭಾರತೀಯ ಅಮೆರಿಕನ್ನರಿಗೆ ಅಭದ್ರತೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ವಲಸೆ ನೀತಿಯಿಂದಾಗಿ ಸುಮಾರು ಮೂರು ಲಕ್ಷ ಭಾರತೀಯ ಅಮೆರಿಕನ್ನರು ಅಭದ್ರತೆಗೆ...
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ವಲಸೆ ನೀತಿಯಿಂದಾಗಿ ಸುಮಾರು ಮೂರು ಲಕ್ಷ ಭಾರತೀಯ ಅಮೆರಿಕನ್ನರು ಅಭದ್ರತೆಗೆ ಈಡಾಗಿದ್ದಾರೆ.
ಕಾನೂನು ಬಾಹಿರವಾಗಿ ಅಮೆರಿಕದಲ್ಲಿ ನೆಲೆಸಿರುವ ಸುಮಾರು 11 ಮಿಲಿಯನ್ ವಲಸಿಗರನ್ನು ಗಡಿಪಾರು ಮಾಡಲು ಡೊನಾಲ್ಡ್ ಟ್ರಂಪ್ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದು, ಸಣ್ಣ ಪುಟ್ಟ ತಪ್ಪು ಮಾಡಿದರೂ ದೇಶದಿಂದ ಹೊರಗಟ್ಟಲು ಮುಂದಾಗಿದೆ.
ಅಮೆರಿಕದ ಹೊಸ ವಲಸೆ ನೀತಿಯಿಂದಾಗಿ ವಲಸಿಗರು ಸಣ್ಣ ಪುಟ್ಟ ಅಪರಾಧ ಮಾಡಿದರೂ ಅವರನ್ನು ಗಡಿಪಾರುನಂತಹ ಕಠಿಣ ಶಿಕ್ಷೆಗೆ ಗುರಿಪಡಿಸಲು ಅವಕಾಶವಿರುವ ಹೋಂ ಲ್ಯಾಂಡ್ ಸೆಕ್ಯುರಿಟಿ ಡಿಪಾರ್ಟ್ ಮೆಂಟ್ ನ ಮೊಮೆಗೆ ಕಾರ್ಯದರ್ಶಿ ಜಾನ್ ಕೆಲ್ಲಿ ಅವರು ಸಹಿ ಮಾಡಿದ್ದಾರೆ.
ಟ್ರಾಫಿಕ್ ಜಾಮ್, ಕಳ್ಳತನ, ಗಡಿ ದಾಟುವಿಕೆ ಮತ್ತು ವಲಸೆ ಕಾನೂನು ಉಲ್ಲಂಘನೆಯಡಿ ವಲಸಿಗರನ್ನು ಬಂಧಿಸುವುದಕ್ಕೆ ಅವಕಾಶವಿದೆ. ಈ ಹಿಂದೆ ಒಬಾಮಾ ಆಡಳಿತದಲ್ಲಿ ಅಕ್ರಮವಾಗಿ ಅಕ್ರಮವಾಗಿ ಗಡಿ ದಾಟುವವರ ವಿಚಾರದಲ್ಲಿ ಮಾತ್ರ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಹೊಸ ವಲಸೆ ಕಾನೂನಡಿ ಸಣ್ಣ ಪುಟ್ಟ ತಪ್ಪು ಮಾಡಿದರೂ ಬಂಧಿಸಿ ಗಡಿಪಾರುಗೊಳಿಸುವುದಕ್ಕೆ ಅವಕಾಶ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com