ಡೊನಾಲ್ಡ್ ಟ್ರಂಪ್, ಬಲ ಚಿತ್ರದಲ್ಲಿ ಹತ್ಯೆಗೀಡಾದ ಶ್ರೀನಿವಾಸ್ ಕುಚಿಬೊಟ್ಲ (ಸಂಗ್ರಹ ಚಿತ್ರ)
ವಿದೇಶ
ಡೊನಾಲ್ಡ್ ಟ್ರಂಪ್ ರ ವಲಸೆ ನೀತಿಗೂ, ಭಾರತೀಯ ಟೆಕ್ಕಿ ಹತ್ಯೆಗೂ ಸಂಬಂಧವಿಲ್ಲ: ಶ್ವೇತ ಭವನ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ವಲಸೆ ನೀತಿಗೂ, ನಿನ್ನೆ ಕಾನ್ಸಾಸ್ ನಲ್ಲಿ...
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ವಲಸೆ ನೀತಿಗೂ, ನಿನ್ನೆ ಕಾನ್ಸಾಸ್ ನಲ್ಲಿ ಭಾರತೀಯ ಮೂಲದ ಎಂಜಿನಿಯರ್ ಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಹೋಲಿಕೆ ಅಸಂಬದ್ಧ ಎಂದು ಶ್ವೇತಭವನ ಹೇಳಿದೆ.
'' ಭಾರತೀಯ ಮೂಲದ ವ್ಯಕ್ತಿಯ ಜೀವ ಹೋಗಿದ್ದು ನಿಜವಾಗಿಯೂ ದುರಂತ. ಆದರೆ ವಲಸೆ ನೀತಿಗೂ ಈ ಹತ್ಯೆಗೂ ಸಂಬಂಧ ಕಲ್ಪಿಸುವುದು ಅಸಂಬದ್ಧ. ಈ ವಿಷಯದಲ್ಲಿ ಹೆಚ್ಚಿಗೆ ಹೇಳಲು ಇಚ್ಛಿಸುವುದಿಲ್ಲ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸೀನ್ ಸ್ಪೈಸರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೊನ್ನೆ ಬುಧವಾರ ರಾತ್ರಿ ಕಾನ್ಸಾಸ್ ನಲ್ಲಿ ನೈಟ್ ಕ್ಲಬ್ ವೊಂದರಲ್ಲಿ 32 ವರ್ಷದ ಹೈದರಾಬಾದ್ ಮೂಲದ ಎಂಜಿನಿಯರ್ ಶ್ರೀನಿವಾಸ್ ಕುಚಿಬೊಟ್ಲ ಹತ್ಯೆ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುದ್ದಿಗಾರರಿಗೆ ಉತ್ತರಿಸಿದರು.
ಘಟನೆಯಲ್ಲಿ ಮತ್ತೊಬ್ಬ ಭಾರತೀಯ ಹಾಗೂ ಅಮೆರಿಕನ್ ಗಾಯಗೊಂಡಿದ್ದಾರೆ. ನೌಕಾಪಡೆಯ ನಿವೃತ್ತ ಸಿಬ್ಬಂದಿ ನಡೆಸಿದ ದಾಳಿಯಲ್ಲಿ ಎಂಜಿನಿಯರ್ ಮೃತಪಟ್ಟಿದ್ದಾರೆ.
ಈ ಮಧ್ಯೆ ಅಮೆರಿಕಾದಲ್ಲಿರುವ ಭಾರತೀಯ ರಾಯಭಾರ ಅಲ್ಲಿನ ಸರ್ಕಾರಕ್ಕೆ ನಡಾವಳಿ ಹೊರಡಿಸಿ ಎಂಜಿನಿಯರ್ ಹತ್ಯೆಯ ತನಿಖೆಯನ್ನು ತೀವ್ರಗೊಳಿಸುವಂತೆ ಒತ್ತಾಯಿಸಿದ್ದಾರೆ.

