ಕಾನ್ಸಾಸ್ ನಲ್ಲಿ ಭಾರತೀಯನ ಹತ್ಯೆಗೆ ಜನಾಂಗೀಯ ದ್ವೇಷವೇ ಪ್ರೇರಣೆ: ವೈಟ್ ಹೌಸ್
ವಾಷಿಂಗ್ಟನ್: ಕಾನ್ಸಾಸ್ ನಲ್ಲಿ ನಡೆದ ಭಾರತೀಯ ಎಂಜಿನೀಯರ್ ಶ್ರೀನಿವಾಸ್ ಕುಚಿಬೋಟ್ಲಾ ಅವರ ಕೊಲೆಗೆ ಜನಾಂಗಿಯ ದ್ವೇಷವೇ ಪ್ರೇರಣೆಯಾಗಿದೆ ಎಂದು ವೈಟ್ ಹೌಸ್ ತಿಳಿಸಿದೆ.
ಕಳೆದ ವಾರ ಅಮೆರಿಕಾ ಕಾನ್ಸಾಸ್ ನಲ್ಲಿ ಆಂಧ್ರ ಪ್ರದೇಶ ಮೂಲದ ಎಂಜಿನೀಯರ್ ಶ್ರೀನಿವಾಸ ಕುಚಿಬೋತ್ಲಾ ಅವರನ್ನು ಅಮೆರಿಕಾದ ನೌಕಾಪಡೆಯ ಹಿರಿಯ ಸಿಬ್ಬಂದಿ ಕೊಲೆ ಮಾಡಿದ್ದ. ಶ್ರೀನಿವಾಸ್ ಜೊತೆಗಿದ್ದ ಮತ್ತೊಬ್ಬ ಭಾರತೀಯ ಘಟನೆಯಲ್ಲಿ ಗಾಯಗೊಂಡಿದ್ದರು.
ಕಾನ್ಸಾಸ್ ನ ಬಾರ್ ವೊಂದರಲ್ಲಿ ಕುಳಿತಿದ್ದ ಭಾರತೀಯ ಶ್ರೀನಿವಾಸ್ ಮೇಲೆ ಆ್ಯಡಂ ಪುರಿಂಟನ್, ಭಯೋತ್ಪಾದಕರೇ ನಮ್ಮ ದೇಶ ಬಿಟ್ಟು ತೊಲಗಿ ಎಂದು ಕೂಗಾಡಿದ್ದ.
ಈ ವೇಳೆ ಅಮೆರಿಕಾದ ವ್ಯಕ್ತಿ ಐಯಾನ್ ಗ್ರಿಲ್ ಎಂಬುವರು ದಾಳಿಯನ್ನು ತಡೆಯಲು ಯತ್ನಿಸಿದ್ದರೂ ಪ್ರಯೋಜನವಾಗಲಿಲ್ಲ. ಭಾರತೀಯರನ್ನು ಮಧ್ಯ ಪೂರ್ವ ರಾಷ್ಟ್ರದ ವಲಸಿಗರೆಂದು ತಪ್ಪು ತಿಳಿದು ಹತ್ಯೆ ನಡೆದಿದೆ. ಆದರೆ ಟ್ರಂಪ್ ಆಡಳಿತ ಮಾತ್ರ ಇದೊಂದು ಜನಾಂಗೀಯ ದ್ವೇಷಕ್ಕಾಗಿ ನಡೆದ ಕೊಲೆ ಎಂದು ನಂಬಿದೆ.
ಟ್ರಂಪ್ ಅಧಿಕಾರಕ್ಕೆ ಬಂದ ನಂತರ 7 ರಾಷ್ಟ್ರಗಳ ವಲಸಿಗರ ಮೇಲೆ ನಿಷೇಧ ಹೇರಿದ್ದರು. ಇದಾದ ನಂತರ ವಲಸಿಗರು ಅಲ್ಲಿ ಭಯದಿಂದ ಬದುಕುವ ಪರಿಸ್ಥಿತಿ ಇದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ