ಇಸ್ತಾಂಬೂಲ್: ಇಸ್ತಾಂಬೂಲ್ ನ ಟರ್ಕಿಶ್ ನಗದಲ್ಲಿ ಹೊಸ ವರ್ಷದಂದು ರೀನಾ ನೈಟ್ ಕ್ಲಬ್ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಇಸ್ಲಾಂಬೂಲ್ ಉಗ್ರ ನಿಗ್ರಹ ಪೊಲೀಸರು ಸೋಮವಾರ ಎಂಟು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ.
ಮೊದಲು ಬಂಧಿಸಿದ ಶಂಕಿತ ವ್ಯಕ್ತಿ ನೀಡಿದ ಮಾಹಿತಿಯನ್ನು ಆಧರಿಸಿ ಪೊಲೀಸರು ಇತರೆ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಬಂದೂಕುಧಾರಿ ಉಗ್ರ ಇನ್ನೂ ತಲೆತಪ್ಪಿಸಿಕೊಂಡಿದ್ದು, ಆತನಿಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಡೋಗನ್ ನ್ಯೂಸ್ ಸಂಸ್ಥೆ ವರದಿ ಮಾಡಿದೆ.
ಡಿಸೆಂಬರ್ 31ರಂದು ರಾತ್ರಿ ನಡೆದ ದಾಳಿಯಲ್ಲಿ 39 ಅಮಾಯಕರ ಮೃತಪಟ್ಟಿದ್ದರು. ಐಸಿಸ್ ಉಗ್ರ ಸಂಘಟನೆ ತನ್ನದೇ ಕೃತ್ಯವೆಂದು ಹೇಳಿಕೊಂಡಿದೆ.
ಉಗ್ರ ದಾಳಿಯಲ್ಲಿ ಮೃತಪಟ್ಟಿರುವ 39 ಮಂದಿಯ ಪೈಕಿ ಇಬ್ಬರು ಭಾರತೀಯರಾಗಿದ್ದು ಉಳಿದವರಲ್ಲಿ ಹೆಚ್ಚಿನವರು ವಿದೇಶೀಯರೇ ಆಗಿದ್ದಾರೆ.