ಟರ್ಕಿ ಕೋರ್ಟ್ ಬಳಿ ಕಾರ್ ಬಾಂಬ್ ಸ್ಫೋಟ: ಮೂಲಗಳು

ಪಶ್ಚಿಮ ಟರ್ಕಿಯ ನಗರ ಇಜ್ಮಿರ್ ನಲ್ಲಿ ಗುರುವಾರ ಕಾರ್ ಬಾಂಬ್ ಒಂದು ಸ್ಫೋಟಗೊಂಡಿದ್ದು, ಕನಿಷ್ಠ ೧೦ ಜನ ಗಾಯಗೊಂಡಿದ್ದಾರೆ. ಈ ಘಟನೆ ಘರ್ಷಣೆಗೆ ಎಡೆಮಾಡಿಕೊಟ್ಟಿದ್ದು,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಸ್ತಾನ್ಬುಲ್: ಪಶ್ಚಿಮ ಟರ್ಕಿಯ ನಗರ ಇಜ್ಮಿರ್ ನಲ್ಲಿ ಗುರುವಾರ ಕಾರ್ ಬಾಂಬ್ ಒಂದು ಸ್ಫೋಟಗೊಂಡಿದ್ದು, ಕನಿಷ್ಠ ೧೦ ಜನ ಗಾಯಗೊಂಡಿದ್ದಾರೆ. ಈ ಘಟನೆ ಘರ್ಷಣೆಗೆ ಎಡೆಮಾಡಿಕೊಟ್ಟಿದ್ದು, ಕನಿಷ್ಠ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ ಎಂದು ಅಧಿಕಾರಿಗಳು ಮತ್ತು ವರದಿಗಳು ತಿಳಿಸಿವೆ. 
ನ್ಯಾಯಾಧೀಶರು ಮತ್ತು ವಕೀಲರು ಪ್ರವೇಶಿಸುವ ನ್ಯಾಯಾಲಯದ ದ್ವಾರದ ಬಳಿ ಈ ಬಾಂಬ್ ಸ್ಫೋಟಿಸಿದ್ದು, ಹಲವಾರು ಆಂಬ್ಯುಲೆನ್ಸ್ ಗಳು ಸ್ಥಳಕ್ಕೆ ಧಾವಿಸಿರುವುದಾಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. 
ಪೊಲೀಸರು ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆಸಿ, ಇಬ್ಬರನ್ನು ಹತ್ಯೆ ಮಾಡಿದ್ದು, ಒಬ್ಬ ಭಯೋತ್ಪಾದಕ ತಪ್ಪಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. 
ಭಾನುವಾರ ಹೊಸ ವರ್ಷದ ಆಚರಣೆಯ ವೇಳೆ ರಾತ್ರಿ ಕ್ಲಬ್ ಗೆ ನುಗ್ಗಿದ್ದ ಭಯೋತ್ಪಾದಕನೊಬ್ಬ ೩೯ ನಾಗರಿಕರನ್ನು ಹತ್ಯೆ ಮಾಡಿದ್ದ. ಈ ಬೆನ್ನಲ್ಲೇ ಮತ್ತೊಂದು ಭಯೋತ್ಪಾದಕ ಘಟನೆ ಇಂದು ನಡೆದಿದೆ.  
ಭಾನುವಾರದ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ೨೦ ಜನ ಮತ್ತವರ ೨೦ ಮಕ್ಕಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com