ಪಾಕಿಸ್ತಾನ ನ್ಯಾಯಾಲಯದ ಐತಿಹಾಸಿಕ ತೀರ್ಪು; ಮೊದಲ ಬಾರಿಗೆ ತೃತೀಯಲಿಂಗಿಗಳ ಜನಗಣತಿ

ಪಾಕಿಸ್ತಾನದ ನ್ಯಾಯಾಲಯವೊಂದು ತೀರ್ಪು ನೀಡಿದ್ದು, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಜನಗಣನೆ ತೃತೀಯ ಲಿಂಗಿಗಳನ್ನು ಒಳಗೊಳ್ಳಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಸ್ಲಮಾಬಾದ್: ಪಾಕಿಸ್ತಾನದ ನ್ಯಾಯಾಲಯವೊಂದು ತೀರ್ಪು ನೀಡಿದ್ದು, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಜನಗಣನೆ ತೃತೀಯ ಲಿಂಗಿಗಳನ್ನು ಒಳಗೊಳ್ಳಲಿದೆ. 
ಸರ್ಕಾರ, ರಾಷ್ಟ್ರೀಯ ದಾಖಲೆ ಮತ್ತು ನೋಂದಣಿ ಇಲಾಖೆ (ಎನ್ಎಡಿಆರ್ ಎ) ಮತ್ತು ಆಂತರಿಕ ಸಚಿವಾಲಯಕ್ಕೆ ಸೂಚನೆ ನೀಡಿರುವ ಲಾಹೋರ್ ಹೈಕೋರ್ಟ್ ತೃತೀಯಲಿಂಗಿ ಸಮುದಾಯವನ್ನು ಜನಗಣನೆಯಲ್ಲಿ ಪರಿಗಣಿಸುವಂತೆ ತಿಳಿಸಿದೆ. ನವೆಂಬರ್ ೨೦೧೬ ರಂದು ತೃತೀಯ ಲಿಂಗಿ ವಕಾರ್ ಅಲಿ ಇದಕ್ಕಾಗಿ ಸಲ್ಲಿಸಿದ್ದ ರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿತ್ತು. 
ಮುಂದೆ ಬರಲಿರುವ ಜನಗಣನೆಯಲ್ಲಿ ತೃತೀಯ ಲಿಂಗಿ ಸಮುದಾಯದ ಪರಿಗಣನೆ, ಅವರ ಲಿಂಗವನ್ನು ನಮೂದಿಸಿ ರಾಷ್ಟ್ರೀಯ ಗುರುತಿನ ಚೀಟಿ ನೀಡುವುದು ಒಳಗೊಂಡಂತೆ ಹಲವು ಮೂಲಭೂತ ಹಕ್ಕುಗಳನ್ನು ಜಾರಿ ಮಾಡಬೇಕು ಎಂದು ಅಲಿ ತಮ್ಮ ಅರ್ಜಿಯಲ್ಲಿ ಕೋರಿದ್ದರು. 
ಈ ವಿಚಾರಣೆ ವೇಳೆ ಹಾಜರಿದ್ದ ಉಪ ಅಟಾರ್ನಿ ಜನರಲ್, ಮುಂದಿನ ಜನಗಣನೆಯಲ್ಲಿ ತೃತೀಯಲಿಂಗಿಗಳನ್ನು ಪರಿಗಣಿಸುವ ಭರವಸೆಯನ್ನು ಕೋರ್ಟ್ ಗೆ ನೀಡಿದ್ದಾರೆ. 
ಮಾರ್ಚ್ ೧೫ ೨೦೧೭ ರಿಂದ ಪಾಕಿಸ್ತಾನ ತನ್ನ ಆರನೇ ಜನಗಣತಿ ಪ್ರಾರಂಭಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com