ನಾನು ಮತ್ತು ಟ್ರಂಪ್ ವಿರೋಧಿಗಳು: ಬರಾಕ್ ಒಬಾಮಾ

ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನಾನು ಕೆಲವು ವಿಷಯಗಳಲ್ಲಿ ವೈರುಧ್ಯಗಳನ್ನು ಹೊಂದಿದ್ದೇವೆ, ಹೀಗಾಗಿ ನಾವಿಬ್ಬರು ವಿರೋಧಿಗಳು,..
ಬರಾಕ್ ಒಬಾಮಾ
ಬರಾಕ್ ಒಬಾಮಾ

ವಾಷಿಂಗ್ಟನ್: ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನಾನು ಕೆಲವು ವಿಷಯಗಳಲ್ಲಿ ವೈರುಧ್ಯಗಳನ್ನು ಹೊಂದಿದ್ದೇವೆ, ಹೀಗಾಗಿ ನಾವಿಬ್ಬರು ವಿರೋಧಿಗಳು, ಆದರೆ ಇಬ್ಬರು ಹೆಚ್ಚಿನ ಪ್ರಮಾಣದಲ್ಲಿ ಆತ್ನ ವಿಶ್ವಾಸ ಹೊಂದಿದ್ದೇವೆ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಟ್ರಂಪ್ ಅಧ್ಯಕ್ಷೀಯ ಸ್ಥಾನದ ಬಗ್ಗೆ ಹೆಚ್ಚಿನ ಸಮಯತಲೆ ಕೆಡಿಸಿಕೊಂಡಿದ್ದಾರೆ ಎಂದು ನಾನು ಯೋಚಿಸಿರಲಿಲ್ಲ,  ಅವರಿಗೆ ಅಗತ್ಯವಿದ್ದರೇ ಯಾವಾಗ ಬೇಕಾದರೂ ಸಲಹೆ ಸಹಕಾರಗಳಿಗೆ ನಾನು ಯಾವಾಗಲು ಸೌಹಾರ್ದಯುತವಾಗಿ ಸ್ಪಂದಿಸುತ್ತೇನೆ ಎಂದು ಹೇಳಿದ್ದಾರೆ.

ಆಡಳಿತ ನಡೆಸುವುದು ಮತ್ತು ಪ್ರಚಾರ ನಡೆಸುವುದರ ನಡುವೆ ವ್ಯತ್ಯಾಸವಿದೆ ಎಂಬುದನ್ನು ಅವರಿಗೆ ತಿಳಿಸಲು ನಾನು ಪ್ರಯತ್ನ ಪಟ್ಟಿದ್ದೇನೆ, ಅಮೆರಿಕಾ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಭೂಮಿ ಮೇಲಿನ ಅತಿ ದೊಡ್ಡ ಸಂಸ್ಥೆಯ ಅಧ್ಯಕ್ಷರಾಗಿರುತ್ತೇನೆ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಅಮೆರಿಕಾ ಅಧ್ಯಕ್ಷ ಸ್ಥಾನವನ್ನ ಕುಟುಂಬದ ವ್ಯವಹಾರದಂತೆ ನಿರ್ವಹಿಸಲು ಸಾಧ್ಯವಿಲ್ಲ, , ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಂಸ್ಥೆಗಳು ಅದರ ಪ್ರಕ್ರಿಯೆ, ಸೇರಿದಂತೆ ಹಲವು ವಿಷಯಗಳ ಬಗ್ಗೆ ಗಮನ ಹರಿಸಬೇಕಾಗಿದೆ, ಏಕೆಂದರೇ ವ್ಯವಸ್ಥೆಯಲ್ಲಿ ಕೇವಲ ನಾವಿರುವುದಿಲ್ಲ, ಇತರ ಜನಗಳು ಕೂಡ ಇರುತ್ತಾರೆ ಎಂದು ಅದರ ಬಗ್ಗೆ ಟ್ರಂಪ್ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಬಳಕೆ ಬಗ್ಗೆ ಎಚ್ಚರಿಕೆ ನೀಡಿರುವ ಒಬಾಮಾ, ತಮ್ಮ ಮಿಲಿಯನ್ ಗಟ್ಟಲೇ ಹಿಂಬಾಲಕರನ್ನು ನೇರವಾಗಿ ಸಂಪರ್ಕಿಸಲು ಟ್ರಂಪ್ ಟ್ವಿಟ್ಟರ್ ಬಳಸುತ್ತಿದ್ದಾರೆ. ಅದರೆ ಸಾಮಾಜಿಕ ಮಾಧ್ಯಮ ಬಳಸುವಾಗ ಅದರ ಬಳಕೆಯ ವಿಧಾನದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದ್ದಾರೆ.

ಜನವರಿ 20 ರಂದು ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ  ಅಮೆರಿಕಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com