ಬಾಬರ್-3 ಪರೀಕ್ಷೆಯ ಯಶಸ್ಸಿನಿಂದ ಪಾಕಿಸ್ತಾನಕ್ಕೆ ಪರಮಾಣು ಟ್ರಯಾಡ್ ಸಾಮರ್ಥ್ಯ!

ಪಾಕಿಸ್ತಾನ ಇದೇ ಮೊದಲ ಬಾರಿಗೆ ಸಬ್ ಮೆರೀನ್ ನಿಂದ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು 'ಪರಮಾಣು ಟ್ರಯಾಡ್ ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಬಾಬರ್-3 ಪರೀಕ್ಷಾರ್ಥ ಉಡಾವಣೆ
ಬಾಬರ್-3 ಪರೀಕ್ಷಾರ್ಥ ಉಡಾವಣೆ
ಇಸ್ಲಾಮಾಬಾದ್: ಪಾಕಿಸ್ತಾನ ಇದೇ ಮೊದಲ ಬಾರಿಗೆ ಸಬ್ ಮೆರೀನ್ ನಿಂದ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು 'ಪರಮಾಣು ಟ್ರಯಾಡ್' (ಸಮುದ್ರ, ಭೂಮಿ ಮತ್ತು ಆಗಸದಿಂದ ಎದುರಾಗುವ ಪರಮಾಣು ದಾಳಿ ಎದುರಿಸುವ) ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ. 
ಪಾಕಿಸ್ತಾನದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ 450 ಕೆಜಿ ತೂಕದ ಅಣ್ವಸ್ತ್ರ ಸಿಡಿತಲೆ ಹೊತ್ಯೊಯ್ಯುವ ಸಾಮರ್ಥ್ಯವಿರುವ ಕ್ರೂಸ್ ಕ್ಷಿಪಣಿ (ಎಸ್ಎಲ್ ಸಿಎಂ) ಬಾಬರ್-3 450 ಕಿಮೀ ಸಾಗುವ ಸಾಮರ್ಥ್ಯ ಹೊಂದಿದ್ದು, ಹಿಂದೂ ಮಹಾಸಾಗರದಲ್ಲಿ ಗೌಪ್ಯವಾಗಿ ಉಡಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 
ಭೂಮಿಯ ಮೂಲಕ ಎದುರಾಗುವ ಪರಮಾಣು ದಾಳಿಯನ್ನು ಎದುರಿಸುವ ಸಾಮರ್ಥ್ಯಹೊಂದಿರುವ ಬಾಬರ್-2 ಕ್ಷಿಪಣಿಯನ್ನು ಕಳೆದ ವರ್ಷ ಪಾಕಿಸ್ತಾನ ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಬಾಬರ್-3 ಕ್ಷಿಪಣಿ ಬಾಬರ್-2 ರ ಮುಂದುವರಿದ ಭಾಗವಾಗಿದ್ದು ಸಮುದ್ರ, ಭೂಮಿ ಮತ್ತು ಆಗಸದಿಂದ ಎದುರಾಗುವ ಪರಮಾಣು ದಾಳಿ ಎದುರಿಸುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ಸಮುದ್ರ, ಭೂಮಿ ಮತ್ತು ಆಗಸದಿಂದ ಎದುರಾಗುವ ಪರಮಾಣು ದಾಳಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರ್ಪಡೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com