ಕಾಬೂಲ್: ಧಾರ್ಮಿಕ ಶಾಲೆಗಳಲ್ಲಿ ಬೋಧನೆ ಮಾಡುತ್ತಿದ್ದ 14 ಪಾದ್ರಿಗಳನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಅಪಹರಿಸಿದ್ದಾರೆ ಎಂದು ಆಫ್ಗಾನಿಸ್ತಾನ ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಗಾನಿಸ್ತಾನದ ಪೂರ್ವ ನನ್ಗಾಹಾರ್ ಪ್ರಾಂತ್ಯದಲ್ಲಿ ಶಾಲೆ ಮತ್ತು ಆಡಳಿತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 14 ಪಾದ್ರಿಗಳನ್ನು ಉಗ್ರರು ಅಪಹರಿಸಿದ್ದಾರೆ ಎಂದು ಶಿಕ್ಷಣ ಇಲಾಖೆ ವಕ್ತಾರ ಮೊಹಮ್ಮದ್ ಅಸಿಫ್ ಹೇಳಿದ್ದಾರೆ.
ಕಳೆದ ವಾರಾಂತ್ಯದಲ್ಲಿ ಶಸ್ತ್ರಸರ್ಜಿತ ಮೂವರು ವ್ಯಕ್ತಿಗಳು ಈ ಕೃತ್ಯವನ್ನು ಎಸಗಿದ್ದಾರೆ. ಆದರೆ ಯಾವುದೇ ಸಂಘಟನೆ ಇದರ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳು ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ದೂಷಿಸಿದ್ದಾರೆ.
ಏತನ್ಮಧ್ಯೆ, ಅಫ್ಗಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದ ಪೊಲೀಸರು, ಸರ್ಕಾರದ ಹಿರಿಯ ಅಧಿಕಾರಿ ಮುಸ್ತಾಫಾ ಸಫಾಯ್ ಎಂಬುವರನ್ನು ಬೈಕ್ ನಲ್ಲಿ ಬಂದ ಶಸ್ತ್ರಸರ್ಜಿತ ಉಗ್ರರು ಹತ್ಯೆ ಮಾಡಿ ಪರಾರಿಯಾಗಿರುವುದಾಗಿ ತಿಳಿಸಿದ್ದಾರೆ.