ಟರ್ಕಿ ವಿಮಾನ ಪತನ: ಸಾವಿನ ಸಂಖ್ಯೆ 37ಕ್ಕೆ ಏರಿಕೆ

ಸೋಮವಾರ ಬೆಳಗ್ಗೆ ಕಿರ್ಗಿಸ್ತಾನದ ಮಾನಸ್ ವಿಮಾನ ನಿಲ್ದಾಣದ ಹತ್ತಿರ ಟರ್ಕಿ ದೇಶದ ಸರಕು...
ವಿಮಾನ ಪತನಗೊಂಡ ಸ್ಥಳದಲ್ಲಿ ಕಂಡುಬಂದ ರಕ್ಷಣಾ ತಂಡ
ವಿಮಾನ ಪತನಗೊಂಡ ಸ್ಥಳದಲ್ಲಿ ಕಂಡುಬಂದ ರಕ್ಷಣಾ ತಂಡ
ಬಿಶ್ಕೇಕ್:ಸೋಮವಾರ ಬೆಳಗ್ಗೆ ಕಿರ್ಗಿಸ್ತಾನದ ಮಾನಸ್ ವಿಮಾನ ನಿಲ್ದಾಣದ ಹತ್ತಿರ ಟರ್ಕಿ ದೇಶದ ಸರಕು ವಿಮಾನ ಪತನವಾಗಿದ್ದರಿಂದ ಮಡಿದವರ ಸಂಖ್ಯೆ 37ಕ್ಕೇರಿದೆ. ಬೋಯಿಂಗ್ 747 ವಿಮಾನ ಗ್ರಾಮವೊಂದರಲ್ಲಿ ಬಿದ್ದಿದ್ದರಿಂದ ಹಲವಾರು ಸ್ಥಳೀಯರು ಮೃತಪಟ್ಟಿದ್ದಾರೆ. 
ತಮ್ಮ ದೇಶದ ಸರಕು ವಿಮಾನ ಎಂದು ಟರ್ಕಿ ದೇಶದ ಸರಕು ವಿಮಾನ ನಿರ್ವಾಹಕರು ದೃಢಪಡಿಸಿದ್ದಾರೆ. 
'' ಜನವರಿ 16ರಂದು ಹಾಂಕಾಂಗ್ ನಿಂದ ಆಗಮಿಸುತ್ತಿದ್ದ ವಿಮಾನ ಕಿರ್ಗಿಸ್ತಾನದ ಬಿಶ್ಕೇಕ್ ಹತ್ತಿರ ರನ್ ವೇಯ ಕೊನೆಗೆ ಅಪಘಾತಕ್ಕೀಡಾಗಿ ಬಿದ್ದಿತು. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಎಸಿಟಿ ಏರ್ ಲೈನ್ಸ್ ಇ-ಮೇಲ್ ಹೇಳಿಕೆಯಲ್ಲಿ ತಿಳಿಸಿದೆ. ವಿಮಾನದಲ್ಲಿ ನಾಲ್ವರು ಪೈಲೆಟ್ ಗಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com