ಅಮೆರಿಕಾ ಮಾಜಿ ಯೋಧ ಚೆಲ್ಸಿಯಾ ಮಾನಿಂಗ್ ಗೆ ಕ್ಷಮಾದಾನ: ಮೇ 17ರಂದು ಬಿಡುಗಡೆ

ಅಮೆರಿಕಾ ಸರ್ಕಾರಕ್ಕೆ ಸಂಬಂಧಪಟ್ಟ ಹಲವು ದಾಖಲೆಗಳನ್ನು ವಿಕಿ ಲೀಕ್ಸ್ ಗೆ ಸೋರಿಕೆ...
ಚೆಲ್ಸಿಯಾ ಮಾನ್ನಿಂಗ್
ಚೆಲ್ಸಿಯಾ ಮಾನ್ನಿಂಗ್
ವಾಷಿಂಗ್ಟನ್ ಡಿ.ಸಿ: ಅಮೆರಿಕಾ ಸರ್ಕಾರಕ್ಕೆ ಸಂಬಂಧಪಟ್ಟ ಹಲವು ದಾಖಲೆಗಳನ್ನು ವಿಕಿ ಲೀಕ್ಸ್ ಗೆ ಸೋರಿಕೆ ಮಾಡಿದ್ದಕ್ಕಾಗಿ 35 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅಮೆರಿಕಾ ಸೇನೆಯ ಮಾಜಿ ಯೋಧ ಚೆಲ್ಸಿಯಾ ಮಾನ್ನಿಂಗ್ ಅವರ ಶಿಕ್ಷೆಯ ಅವಧಿಯನ್ನು ಅಧ್ಯಕ್ಷ ಬರಾಕ್ ಒಬಾಮಾ ಬದಲಾಯಿಸಿದ್ದಾರೆ.
ಈ ಮಧ್ಯೆ ಚೆಲ್ಸಿಯಾ ಮೇ 17ರಂದು ಬಿಡುಗಡೆಯಾಗಲಿದ್ದಾರೆ. ಮೂಲ ಶಿಕ್ಷೆ ಪ್ರಕಾರ ಅವರು 2045ರಲ್ಲಿ ಬಿಡುಗಡೆಯಾಗಬೇಕಿತ್ತು.
ಚೆಲ್ಸಿಯಾ ಎಲಿಜಬೆತ್ ಮೇನ್ನಿಂಗ್ ಅಮೆರಿಕಾದ ಸೇನಾ ಯೋಧನಾಗಿದ್ದು ಬೇಹುಗಾರಿಕೆ ವಿಧಿ ಉಲ್ಲಂಘನೆಗಳಿಗೆ ಜುಲೈ 2013ರಲ್ಲಿ 35 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com