ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಹಿಂದೂ ಅರ್ಚಕರು!

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು ಹಿಂದೂ ಅರ್ಚಕರು ಭಾಗವಹಿಸಲಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Updated on
ವಾಷಿಂಗ್ ಟನ್: ಅಮೆರಿಕದಲ್ಲಿ ನೂತನ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ನಂತರ ಸಾಮಾನ್ಯವಾಗಿ ನಡೆಸಲಾಗುವ ರಾಷ್ಟ್ರೀಯ ಪ್ರಾರ್ಥನೆ ಸೇವೆ ನಡೆಸಲಾಗುತ್ತದೆ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು ಹಿಂದೂ ಅರ್ಚಕರು ಭಾಗವಹಿಸಲಿದ್ದಾರೆ. 
ಮೇರಿಲ್ಯಾಂಡ್ ನ ಲಾನ್ಹಾಮ್ ನಲ್ಲಿರುವ ಪ್ರಸಿದ್ಧ ಶಿವ-ವಿಷ್ಣು ದೇವಾಲಯದ ಅರ್ಚಕ ಎಲ್ ನಾರಾಯಣಾಚಾರ್ ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣದ ನಂತರ ವಾಷಿಂಗ್ ಟನ್ ನ ನ್ಯಾಷನಲ್ ಕೆಥೆಡ್ರಿಲ್ ನಲ್ಲಿ ನಡೆಯಲಿರುವ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಅಧ್ಯಕ್ಷೀಯ ಪದಗ್ರಹಣ ಸಮಿತಿ ಸಿಇಒ ಸಾರಾ ಆಮ್ ಸ್ಟ್ರಾಂಗ್ ಮಾಹಿತಿ ನೀಡಿದ್ದಾರೆ. 
ಅಮೆರಿಕ ನೂತನ ಅಧ್ಯಕ್ಷರ ಪದಗ್ರಹಣದ ನಂತರ ದೇಶದ ಒಳಿತಿಗಾಗಿ ಪ್ರಾರ್ಥಿಸಲು ನಡೆಯುವ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಹಿಂದೂ ಅರ್ಚಕರಿಗೆ ಆಹ್ವಾನ ನೀಡಿರುವ ಮೊದಲ ನಿದರ್ಶನ ಇದಾಗಿದ್ದು, ಕಾರ್ಯಕ್ರಮದಲ್ಲಿ ಮತ್ತೋರ್ವ ಭಾರತೀಯರಾದ ಸಿಖ್ ಸಮುದಾಯದ ಜೆಸ್ಸಿ ಸಿಂಗ್ ಸಹ ಭಾಗಿಯಾಗಲಿರುವುದು ವಿಶೇಷವಾಗಿದೆ. 
ಎಲ್ಡರ್ ಡಿ ಟೊಡ್ ಕ್ರಿಸ್ಟೋಫರ್ಸನ್, ಪ್ರೀಸ್ಟ್ ಬಿಷಪ್ ಹ್ಯಾರಿ ಜಾಕ್ ಸನ್, ಇಮಾಮ್ ಮೊಹಮ್ಮದ್ ಮಜಿದ್ ಸೇರಿದಂತೆ ಅಮೆರಿಕದ ಪ್ರಮುಖ ಧಾರ್ಮಿಕ ಮುಖಂಡರು ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 1933 ರಲ್ಲಿ ಮೊದಲ ಅಧ್ಯಕ್ಷರಾಗಿದ್ದ ಜಾರ್ಜ್ ವಾಷಿಂಗ್ ಟನ್ ಪದಗ್ರಹಣದ ನಂತರದಿಂದ ನೂತನ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ನಂತರ ನಡೆಯುವ ಪ್ರಾರ್ಥನಾ ಕಾರ್ಯಕ್ರಮದಲ್ಲಿ ದೇಶದ ಒಳಿತಿಗಾಗಿ ಪ್ರಾರ್ಥಿಸಲಾಗುತ್ತದೆ. ದೇಶಕ್ಕಾಗಿ ಅತ್ಯುನ್ನತ ತ್ಯಾಗ ಮಾಡಿದವರಿಗೆ ಮೊದಲು ನಮನ ಸಲ್ಲಿಸಲಾಗುತ್ತದೆ. ನಂತರ ದೇಶದ ಒಳಿತಿಗಾಗಿ ಪ್ರಾರ್ಥಿಸಲಾಗುತ್ತದೆ.  ಶ್ಲೋಕಗಳು, ವಾಚನಗೋಷ್ಠಿಗಳು, ಮತ್ತು ಪ್ರಾರ್ಥನೆಗಳಿರಲಿರುವ ಕಾರ್ಯಕ್ರಮಗಳಲ್ಲಿ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಭಾಗವಹಿಸಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com