ಮೆಕ್ಸಿಕೋ, ಬ್ರಿಟನ್ ನಾಯಕರನ್ನು ಭೇಟಿ ಮಾಡಲಿರುವ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಬ್ರಿಟನ್ ಪ್ರಧಾನಿ ಥೆರೇಸಾ ಮೇ, ಮೆಕ್ಸಿಕೋ ಅಧ್ಯಕ್ಷ ಎನ್ರೀಕ್‌ ಪೆನಾ ನೀಟೋ ಅವರನ್ನು ಭೇಟಿ ಮಾಡಲಿದ್ದಾರೆ
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಬ್ರಿಟನ್ ಪ್ರಧಾನಿ ಥೆರೇಸಾ ಮೇ, ಮೆಕ್ಸಿಕೋ ಅಧ್ಯಕ್ಷ ಎನ್ರೀಕ್‌ ಪೆನಾ ನೀಟೋ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಶ್ವೇತ ಭವನದ ವಕ್ತಾರರು ತಿಳಿಸಿದ್ದಾರೆ. 
ಜನವರಿ 27 ರಂದು ಬ್ರಿಟನ್ ಪ್ರಧಾನಿ ಥೆರೇಸಾ ಮೇ ಅವರನ್ನು ಟ್ರಂಪ್ ಭೇಟಿ ಮಾಡಲಿದ್ದು, ಜ.31 ಕ್ಕೆ ಮೆಕ್ಸಿಕೋ ಅಧ್ಯಕ್ಷ ಎನ್ರಿಕ್ ಪೆನಾ ನೀಟೋ ಅವರೊಂದಿಗಿನ ಭೇಟಿ ನಿಗದಿಯಾಗಿದೆ ಎಂದು ಶ್ವೇತ ಭವನ ತಿಳಿಸಿದೆ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಅಭಿನಂದನೆ ಸಲ್ಲಿಸಿದ್ದ ಥೆರೇಸಾ ಮೇ ಅಮೆರಿಕಾದೊಂದಿಗೆ ನಿಕಟ ದ್ವಿಪಕ್ಷೀಯ ಬಾಂಧವ್ಯ ಮುಂದುವರೆಸಲು ಉತ್ಸುಕರಾಗಿರುವುದುದಾಗಿ ಹೇಳಿದ್ದರು. 
ಯುರೋಪಿಯನ್ ಒಕ್ಕೂಟದಿಂದ ಹೊರಬಂದ ನಂತರ ಬ್ರಿಟನ್ ಅಮೆರಿಕದ ನೂತನ ಅಧ್ಯಕ್ಷರೊಂದಿಗೆ ವಾಣಿಜ್ಯ ವಹಿವಾಟು ಯೋಜನೆಗಳು ಹಾಗೂ ಅದಕ್ಕೆ ಸಂಬಂಧಿಸಿದ ಒಪ್ಪಂದಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. 
ಇನ್ನು ಮೆಕ್ಸಿಕೋ ಅಧ್ಯಕ್ಷ ಎನ್ರಿಕ್ ಪೆನಾ ನೀಟೋ ಅವರೊಂದಿಗೆ ವಾಣಿಜ್ಯ ವಹಿವಾಟು, ವಲಸೆ ಹಾಗೂ ಭದ್ರತೆಯ ವಿಷಯವಾಗಿ ಟ್ರಂಪ್ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com