
ಲಾಹೋರ್: ಪಾಕಿಸ್ತಾನ ರೂಪದರ್ಶಿ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಕಂದೀಲ್ ಬಲೋಚ್ ಕೊಲೆ ಪ್ರಕರಣ ಹೊಸ ತಿರುವು ಪಡೆದು ಕೊಂಡಿದೆ.
ಕೊಲೆ ಪ್ರಕರಣದ ಶಂಕಿತ ಆರೋಪಿಗಳ ವಿರುದ್ಧ ಸಾಕ್ಷಿ ಹೇಳಲು ಕಂದೀಲ್ ಬಲೋಚ್ ತಂದೆ ಹಾಗೂ ದೂರುದಾರರೂ ಆಗಿರುವ ಅಜೀಮ್ ಬಲೋಚ್ ನಿರಾಕರಿಸಿದ್ದಾರೆ.
ನಿನ್ನೆ ಕೋರ್ಟ್ ನಲ್ಲಿ ನಡೆದ ವಿಚಾರಣೆ ವೇಳೆ, ಆರೋಪಿ ಹಾಗೂ ಕಂದೀಲ್ ಬಲೋಚ್ ಸಹೋದರ ಅಸ್ಲಾಮ್ ವಿರುದ್ಧ ಸಾಕ್ಷಿ ಹೇಳಲು ಅಜೀಮ್ ಬಲೋಚ್ ನಿರಾಕರಿಸಿದ್ದಾರೆ. ಈ ಸಂಬಂಧ ಕಂದೀಲ್ ತಂದೆಯ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕಂದೀಲ್ ಕೊಲೆ ಪ್ರಕರಣದಲ್ಲಿ ಆಕೆಯ ಸಹೋದರ ಅಸ್ಲಾಂ ಕೈವಾಡವಿದೆ ಎಂದು ಆಕೆಯ ತಂದೆ ಅಜೀಮ್ ಹೇಳಿಕೆ ನೀಡಿದ್ದರು. ಆದರೆ ಈಗ ತಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ.
2016ರ ಜುಲೈ 16 ರಂದು ಲಾಹೋರ್ ನಲ್ಲಿ ಕಂದೀಲ್ ಬಲೋಚ್ ಕೊಲೆಯಾಗಿತ್ತು, ಇದೊಂದು ಮರ್ಯಾದಾ ಹತ್ಯೆ ಎಂದು ಆಕೆಯ ಸಹೋದರ ಹೇಳಿಕೊಂಡಿದ್ದ. ಆಕೆ ನಮ್ಮ ಕುಟುಂಬದ ಗೌರವವನ್ನು ಹಾಳು ಮಾಡುತ್ತಿದ್ದಳು, ಆಕೆಯನ್ನು ಕೊಂದಿದ್ದಕ್ಕೆ ನನಗೆ ಹೆಮ್ಮೆಇದೆ ಎಂದು ವಿಡಿಯೋದಲ್ಲಿ ಹೇಳಿದ್ದ.
Advertisement