ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ಭಾರತೀಯ ಟೆಕ್ಕಿಗಳ ಜೀವಾಳ ಹೆಚ್-1ಬಿ ವೀಸಾ ಮಿತಿಗೆ ಟ್ರಂಪ್ ಆದೇಶ ಸಾಧ್ಯತೆ

ಅಮೆರಿಕಾಗೆ ಹೋಗುವ ಭಾರತೀಯ ಟೆಕ್ಕಿಗಳ ಜೀವಾಳವಾಗಿರುವ ಹೆಚ್1-ಬಿ ವೀಸಾಗೆ ಸಂಬಂಧಿಸಿದಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಆದೇಶ ಹೊರಡಿಸುವ ಸಾಧ್ಯತೆ ಇದೆ
ವಾಷಿಂಗ್ ಟನ್: ಅಮೆರಿಕಾಗೆ ಹೋಗುವ ಭಾರತೀಯ ಟೆಕ್ಕಿಗಳ ಜೀವಾಳವಾಗಿರುವ ಹೆಚ್1-ಬಿ ವೀಸಾಗೆ ಸಂಬಂಧಿಸಿದಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷರ ವಕ್ತಾರ ಸಿಯಾನ್ ಸ್ಪೈಸರ್ ಹೇಳಿದ್ದಾರೆ. 
ಅಮೆರಿಕ ವಕ್ತಾರರ ಹೇಳಿಕೆಯಲ್ಲಿ ಹೆಚ್1-ಬಿ ವೀಸಾ ಪಡೆಯುವ ವಲಸಿಗರ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸುವ ಸೂಚನೆ ದೊರೆತಿದೆ. ಹೆಚ್1-ಬಿ ವೀಸಾ ಹಾಗೂ ಇತರ ವೀಸಾಗಳು ವಲಸೆ ನೀತಿಗಳ ಸುಧಾರಣಾ ಕ್ರಮಗಳ ಭಾಗವಾಗಿದೆ ಎಂದು ಸಿಯಾನ್ ಸ್ಪೈಸರ್ ತಿಳಿಸಿದ್ದಾರೆ.. 
ವೀಸಾ ಸೇರಿದಂತೆ ವಲಸೆ ಯೋಜನೆಗಳ ಸಂಪೂರ್ಣ ಪರಿಶೀಲನೆ ನಡೆಯಬೇಕಿದೆ. ವಲಸೆ ಹಾಗೂ ವೀಸಾಗಳಿಗೆ ಸಂಬಂಧಿಸಿದಂತೆ ಕಠಿಣ ನಿರ್ಧಾರಗಳು ಹಾಗೂ ಸಮಗ್ರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದಿದ್ದಾರೆ ಸಿಯಾನ್ ಸ್ಪೈಸರ್.  ಅಮೆರಿಕನ್ನರ ಕೆಲಸಕ್ಕೆ ಕುತ್ತು ತಂದಿರುವ ವೀಸಾಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲು ಆದೇಶ ನೀಡುವುದಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ಭರವಸೆ ನೀಡಿದ್ದರು. 
ಹೆಚ್1-ಬಿ ವೀಸಾಗಳ ಜೊತೆಗೆ ಪತ್ನಿಯ ಮತ್ತು ಇತರ ವರ್ಗದ ವೀಸಾಗಳ ಮೇಲೂ ಟ್ರಂಪ್ ಕ್ರಮ ಕೈಗೊಳ್ಳಲಿರುವ ಬಗ್ಗೆ ಸ್ಪೈಸರ್ ಸುಳಿವು ನೀಡಿದ್ದಾರೆ. ಅಮೆರಿಕಾ ಸಂಸ್ಥೆಗಳಲ್ಲಿ ವರ್ಗಾವಣೆಗೊಳ್ಳುವ ಉದ್ಯೋಗಿಗಳಿಗೆ ಎಲ್ -1 ವೀಸಾಗಳನ್ನು ನೀಡಲಾಗುತ್ತಿದ್ದರೆ. ಹೆಚ್1 ಬಿ ವೀಸಾಗಳನ್ನು ಅರ್ಹ ವೃತ್ತಿಪರರಿಗೆ ನೀಡಲಾಗುತ್ತದೆ. ಎರಡೂ ರೀತಿಯ ವೀಸಾಗಳು ಭಾರತೀಯ ಕಂಪನಿಗಳಿಂದ ಹೆಚ್ಚಾಗಿ ಬಳಕೆಯಾಗುತ್ತಿದೆ. 2015 ರಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮ  ಹೆಚ್1-ಬಿ ವೀಸಾ ಹೊಂದಿರುವವರ ಪತ್ನಿಯರು ಕೆಲಸ ಮಾಡುವುದಕ್ಕೆ ಅನುಮತಿ ಪಡೆಯುವುದಕ್ಕೆ ಅವಕಾಶ ನೀಡಿತ್ತು. 

Related Stories

No stories found.

Advertisement

X
Kannada Prabha
www.kannadaprabha.com