ಶಿಷ್ಟಾಚಾರ ಬದಿಗೊತ್ತಿ ಪ್ರಧಾನಿ ಸ್ವಾಗತಿಸಿದ ಇಸ್ರೇಲ್ ಅಧ್ಯಕ್ಷ, ಇದು ಭಾರತೀಯರಿಗೆ ನೀಡಿದ ಗೌರವ ಎಂದ ಮೋದಿ

ಮೂರು ದಿನಗಳ ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಸ್ರೇಲ್ ಅಧ್ಯಕ್ಷ ರುವೆನ್‌ ರಿವಿನ್‌....
ನರೇಂದ್ರ ಮೋದಿ - ರುವೆನ್‌ ರಿವಿನ್‌
ನರೇಂದ್ರ ಮೋದಿ - ರುವೆನ್‌ ರಿವಿನ್‌
ಜೆರುಸಲೆಂ: ಮೂರು ದಿನಗಳ ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಸ್ರೇಲ್ ಅಧ್ಯಕ್ಷ ರುವೆನ್‌ ರಿವಿನ್‌ ಅವರನ್ನು ಭೇಟಿ ಮಾಡಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
ರುವೆನ್ ರಿವಿನ್ ಭೇಟಿಯ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ಇಸ್ರೇಲ್ ಅಧ್ಯಕ್ಷರು ಶಿಷ್ಟಾಚಾರ ಬದಿಗೊತ್ತಿ ನನಗೆ ಅತ್ಯಂತ ಆತ್ಮಿಯ ಸ್ವಾಗತ ನೀಡಿದರು. ಇದು ಭಾರತೀಯರ ಮೇಲಿನ ಗೌರವದ ಸಂಕೇತ ಎಂದಿದ್ದಾರೆ.
ಇಂಡಿಯಾ ಮತ್ತು ಇಸ್ರೇಲ್ ಸಂಬಂಧದ ಕುರಿತು ಐ ಗಾಗಿ ಐ ಮತ್ತು ಐ ವಿತ್ ಐ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಅಲ್ಲದೆ ತಮ್ಮನ್ನು ಆತ್ಮಿಯವಾಗಿ ಬರಮಾಡಿಕೊಂಡ ಇಸ್ರೇಲ್ ಅಧ್ಯಕ್ಷರಿಗೆ ಮೋದಿಗೆ ಧನ್ಯವಾದ ಹೇಳಿದ್ದಾರೆ.
ಭಾರತ ಸ್ವಾತಂತ್ರ್ಯವಾದ ನಂತರ 70 ವರ್ಷಗಳ ಬಳಿಕ ಇಸ್ರೇಲ್‌ಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಯೊಂದಿಗೆ ನಿನ್ನೆ ಟೆಲ್ ಅವೀವ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿ ನರೇಂದ್ರ ಮೋದಿ ಅವರಿಗೆ ಯೆಹೂದಿ ರಾಷ್ಟ್ರ ಭವ್ಯ ಸ್ವಾಗತ ನೀಡಿದೆ.
ಎಲ್ಲ ಶಿಷ್ಟಾಚಾರಗಳನ್ನು ಬದಿಗಿರಿಸಿ ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಖುದ್ದಾಗಿ ಮೋದಿ  ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಕಾದಿದ್ದರು. ಅವರ ಸಂಪುಟದ ಎಲ್ಲ ಸದಸ್ಯರು ಹಾಗೂ ವಿವಿಧ ಧರ್ಮಗಳ ಪ್ರತಿನಿಧಿಗಳು ಅಲ್ಲಿ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com