ಜಿ-20 ಶೃಂಗಸಭೆ: ಭಯೋತ್ಪಾದನೆ ಹತ್ತಿಕ್ಕಲು ಪ್ರಧಾನಿ ಮೋದಿ ಮಂಡಿಸಿದ ಸೂತ್ರಗಳು

ಭಯೋತ್ಪಾದನೆ ಒಂದು ದೊಡ್ಡ ಸವಾಲಾಗಿದೆ ಎಂದಿರು ಪ್ರಧಾನಿ ನರೇಂದ್ರ ಮೋದಿ ಅವರು, ಅದನ್ನು ಹತ್ತಿಕ್ಕುವುದಕ್ಕಾಗಿ ಜಿ-20 ಶೃಂಗ....
ನರೇಂದ್ರ ಮೋದಿ
ನರೇಂದ್ರ ಮೋದಿ
Updated on
ಹ್ಯಾಮ್ ಬರ್ಗ್: ಭಯೋತ್ಪಾದನೆ ಒಂದು ದೊಡ್ಡ ಸವಾಲಾಗಿದೆ ಎಂದಿರು ಪ್ರಧಾನಿ ನರೇಂದ್ರ ಮೋದಿ ಅವರು, ಅದನ್ನು ಹತ್ತಿಕ್ಕುವುದಕ್ಕಾಗಿ ಜಿ-20 ಶೃಂಗ ಸಭೆಯಲ್ಲಿ 10 ಸೂತ್ರಗಳನ್ನು ಮಂಡಿಸಿದ್ದಾರೆ.
ಜರ್ಮನಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಬ್ರಿಕ್ಸ್ ನಾಯಕರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ,  ಭಯೋತ್ಪಾದನೆ ನಿಗ್ರಹ ಹಾಗೂ ಜಾಗತಿಕ ಅರ್ಥವ್ಯವಸ್ಥೆ ಬಗ್ಗೆ ಬ್ರಿಕ್ಸ್ ನಾಯಕತ್ವವನ್ನು ಪ್ರದರ್ಶಿಸಬೇಕಿದೆ ಎಂದು ಕರೆ ನೀಡಿದ್ದಾರೆ. 
ಜಿ-20 ರಾಷ್ಟ್ರಗಳು ಒಗ್ಗೂಡಿ ಭಯೋತ್ಪಾದನೆ, ಉಗ್ರವಾದಕ್ಕೆ ಸಿಗುತ್ತಿರುವ ಆರ್ಥಿಕ ನೆರವುಗಳನ್ನು ವಿರೋಧಿಸಬೇಕಿದೆ ಎಂದು ಮೋದಿ ಹೇಳಿದ್ದಾರೆ. ಭಾರತದಲ್ಲಿ ಇತ್ತೀಚೆಗಷ್ಟೇ ಜಿಎಸ್ ಟಿ ಜಾರಿಯಾಗಿರುವುದರ ಬಗ್ಗೆಯೂ ಪ್ರಸ್ತಾಪಿಸಿರುವ ಮೋದಿ, ಭಾರತದಲ್ಲಿ ಜಾರಿಯಾಗಿರುವ ಜಿಎಸ್ ಟಿ ಯಿಂದ ಉದ್ಯಮಕ್ಕೆ ಸಹಾಯವಾಗಲಿದೆ ಎಂದು ಹೇಳಿದ್ದಾರೆ. 
ಭಯೋತ್ಪಾದನೆ ಹತ್ತಿಕ್ಕಿಲು ಮೋದಿ ಮಂಡಿಸಿದ 10 ಸೂತ್ರಗಳು
1. ಭಯೋತ್ಪಾದನೆಗೆ ಬೆಂಬಲ ನೀಡುವ ದೇಶಗಳ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ. ಭಯೋತ್ಪಾದನೆ ಬೆಂಬಲಿಸುವ ದೇಶಗಳ ಪ್ರತಿನಿಧಿಗಳನ್ನು ಜಿ-20 ಶೃಂಗಸಭೆಯಲ್ಲಿ ಭಾಗವಹಿಸುವುದನ್ನು ನಿಷೇಧಿಸಬೇಕು.
2. ಜಿ-20 ಸದಸ್ಯರ ನಡುವೆ ಶಂಕಿತ ಭಯೋತ್ಪಾದಕರ ಪಟ್ಟಿಯ ವಿನಿಮಯವಾಗಬೇಕು. ಘೋಷಿತ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.
3. ಭಯೋತ್ಪಾಕರ ಗಡಿಪಾರು ಮಾಡಲು ಕಾನೂನು ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು.
4. ಅಂತರಾಷ್ಟ್ರೀಯ ಭಯೋತ್ಪಾದನೆ ಕುರಿತು ಶೀಘ್ರ ಸಮಗ್ರ ಸಮಾವೇಶ ನಡೆಯಬೇಕು.
5. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯಗಳು ಹಾಗೂ ಇತರೆ ಅಂತರಾಷ್ಟ್ರೀಯ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ಜಾರಿಯಾಗಬೇಕು.
6. ಮೂಲಭೂತವಾದದ ಕಪಿಮುಷ್ಠಿಯಿಂದ ಬೇರ್ಪಡಿಸಲು ಅಗತ್ಯ ಕಾರ್ಯ ತಂತ್ರಗಳನ್ನು ರೂಪಿಸಬೇಕು.
7. ಎಫ್ ಎಟಿಎಫ್ ನಂತಹ ಉಗ್ರರಿಗೆ ಆರ್ಥಿಕ ನೆರವು ನೀಡುವ ಸಂಘಟನೆಗಳನ್ನು ಮತ್ತು ಮಾಧ್ಯಮಗಳನ್ನು ನಿಯಂತ್ರಿಸಬೇಕು.
8. ಉಗ್ರರಿಗೆ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳು ಸಿಗದಂತೆ ಕ್ರಮ ಕೈಗೊಳ್ಳಬೇಕು.
9. ಉಗ್ರರ ಚಟುವಟಿಕೆಗಳ ಮೇಲೆ ನಿಗಾವಹಿಸಲು ಕೇಂದ್ರೀಯ ಸೈಬರ್ ಭದ್ರತಾ ಘಟಕ ಸ್ಥಾಪಿಸಲು ಜಿ-20 ದೇಶಗಳು ಸಹಕರಿಸಬೇಕು.
10. ಭಯೋತ್ಪಾದನೆ ನಿಯಂತ್ರಿಸಲು ಜಿ-20 ದೇಶಗಳು ರಾಷ್ಟ್ರೀಯ ಭದ್ರತಾ ಸಲಹೆಗಾರರ ಕೂಟವನ್ನು ರಚಿಸಬೇಕು.
ಬ್ರಿಕ್ಸ್ ಸಮ್ಮೆಳನದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸಹ ಭಾಗಿಯಾಗಿದ್ದು, ಭಯೋತ್ಪಾದನೆ ಕುರಿತ ನಿಲುವಿಗೆ ಚೀನಾ-ಭಾರತ ರಾಷ್ಟ್ರಗಳ ನಾಯಕರು ಪರಸ್ಪರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com