ಶಾಲಾ ಶಿಕ್ಷಣ ಮುಗಿಸಿದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್ಜೈ

ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಆ ಬಾಲಕಿ ಹೋರಾಡುತ್ತಿದ್ದಳು. ಅದನ್ನು ವಿರೋಧಿಸಿ ತಾಲಿಬಾನ್...
ಮಲಾಲಾ ಯೂಸಫ್ಜೈ
ಮಲಾಲಾ ಯೂಸಫ್ಜೈ
ಲಂಡನ್: ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಆ ಬಾಲಕಿ ಹೋರಾಡುತ್ತಿದ್ದಳು. ಅದನ್ನು ವಿರೋಧಿಸಿ ತಾಲಿಬಾನ್ ಬಂದೂಕುಧಾರಿಯೊಬ್ಬ ಆ ಬಾಲಕಿಯ ತಲೆಗೆ 2012ರಲ್ಲಿ ಗುಂಡೇಟು ಹೊಡೆದ. ಆಕೆಯೇ ಪಾಕಿಸ್ತಾನದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್ಜೈ.  ಇದೀಗ ಮಲಾಲಾ ಬ್ರಿಟನ್ ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮುಗಿಸಿದ್ದಾಳೆ. ತನ್ನ  ಸಾಧನೆಯನ್ನು ಆಕೆ ಕಹಿ ಸಿಹಿ ಎಂದು ಬಣ್ಣಿಸಿದ್ದಾಳೆ.
''ಇಂದು ನನ್ನ  ಶಾಲಾ ದಿನದ ಕೊನೆಯ ದಿನ ಮತ್ತು ಟ್ವಿಟ್ಟರ್ ನಲ್ಲಿ ಮೊದಲ ದಿನವಾಗಿದೆ'' ಎಂದು ತಾನು ಹೊಸದಾಗಿ ತೆರೆದಿರುವ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾಳೆ. ಆಕೆ ಟ್ವಿಟ್ಟರ್ ಖಾತೆ ತೆರೆದ ಕೇವಲ ಮೂರು ಗಂಟೆಗಳಲ್ಲಿ 1,34,000 ಅನುಯಾಯಿಗಳನ್ನು ಪಡೆದಿದ್ದಾಳೆ.
ಯೂಸಫ್ಜೈಗೆ ಈ ತಿಂಗಳಿಗೆ ವರುಷ 20 ತುಂಬುತ್ತದೆ. 2012 ಅಕ್ಟೋಬರ್ ತಿಂಗಳಲ್ಲಿ ತಲೆಗೆ ಗುಂಡೇಟು ಬಿದ್ದು ಇಂಗ್ಲೆಂಡ್ ನ ಬರ್ಮಿಂಗ್ಹ್ಯಾಮ್ ನಲ್ಲಿ ಚಿಕಿತ್ಸೆ ಪಡೆದ ನಂತರ ಅದೇ ನಗರದಲ್ಲಿ ಶಾಲಾ ವ್ಯಾಸಂಗ ಮಾಡುತ್ತಿದ್ದಳು.  
ಅಲ್ಲಿನ ಸ್ವಾಟ್ ವಾಲಿಯಲ್ಲಿ ವಾಸವಾಗಿದ್ದುಕೊಂಡು ಬ್ಲಾಗ್ ಗಳ ಮೂಲಕ ಹಾಗೂ ಬೇರೆ ಮಾಧ್ಯಮದ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರಚಾರ ನಡೆಸುತ್ತಿದ್ದಳು. ಪರೀಕ್ಷೆ ಮುಗಿಸಿ ತನ್ನ ಗ್ರಾಮದ ಮನೆಗೆ ಮರಳುತ್ತಿದ್ದ ವೇಳೆ ಮಲಾಲಾ ಮೇಲೆ ತಾಲಿಬಾನ್ ಉಗ್ರಗಾಮಿ ಬಂದೂಕಿನಿಂದ ಗುಂಡು ಹಾರಿಸಿದ್ದ.
ಆ ಬಳಿಕ ಹೆಚ್ಚು ಪ್ರಚಾರಕ್ಕೆ ಬಂದ ಮಲಾಲಾ ಯೂಸಫ್ಜೈಗೆ 2014ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿತ್ತು.
ಪ್ರೌಢಶಾಲೆಯಿಂದ ಗ್ರಾಜುಯೇಷನ್ ಆಗಿ ಹೊರಬರುವುದು ನನಗೆ ಕಹಿ ಸಿಹಿಯೆನಿಸುತ್ತದೆ. ವಿಶ್ವದಾದ್ಯಂತ ಲಕ್ಷಾಂತರ ಹೆಣ್ಣು ಮಕ್ಕಳು ಶಾಲೆಗೆ ಹೋಗದೆ ಬಾಕಿಯುಳಿದಿದ್ದು, ತಮ್ಮ ಶಿಕ್ಷಣವನ್ನು ಪೂರೈಸುವ ಅವಕಾಶ ಅವರಿಗೆ ಸಿಗುವುದಿಲ್ಲ. ತಾನೀಗ ತನ್ನ ಭವಿಷ್ಯದ ಬಗ್ಗೆ ಕಾತರಳಾಗಿದ್ದು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರ ಉತ್ತಮ ಭವಿಷ್ಯಕ್ಕಾಗಿ ಹೋರಾಟ ಮುಂದುವರಿಸುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾಳೆ.
ಓದಿನಲ್ಲಿ ಮುಂದಿರುವ ಮಲಾಲಾ ಮುಂದಿನ ತಿಂಗಳು ತನ್ನ ಎ ಹಂತದ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾಳೆ. ಆಕೆಗೆ ಆಕ್ಸರ್ಡ್ ವಿಶ್ವವಿದ್ಯಾಲಯದಲ್ಲಿ ಕಲಿಯಲು ಅವಕಾಶ ಬಂದಿದೆ.
ಆಕೆ ಕಾಲೇಜಿನಲ್ಲಿ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com