ಭಾರತ-ಚೀನಾ ಈ ಹಿಂದೆಯೂ ಅನೇಕ ಗಡಿ ವಿವಾದಗಳನ್ನು ನಿಭಾಯಿಸಿವೆ: ವಿದೇಶಾಂಗ ಅಧಿಕಾರಿ ಜೈಶಂಕರ್

ಭಾರತ-ಚೀನಾಗಳು ಈ ಹಿಂದೆಯೂ ಅನೇಕ ಗಡಿ ವಿವಾದಗಳನ್ನು ನಿರ್ವಹಿಸಿವೆ, ಈ ಬಾರಿ ಅಂತಹ ವಿವಾದ ನಿರ್ವಹಣೆ ಸಾಧ್ಯವಾಗದೇ ಇರುವುದಕ್ಕೆ ಕಾರಣವಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್
ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್
ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್
ಸಿಂಗಪೂರ್: ಭಾರತ-ಚೀನಾಗಳು ಈ ಹಿಂದೆಯೂ ಅನೇಕ ಗಡಿ ವಿವಾದಗಳನ್ನು ನಿರ್ವಹಿಸಿವೆ, ಈ ಬಾರಿ ಅಂತಹ ವಿವಾದ ನಿರ್ವಹಣೆ ಸಾಧ್ಯವಾಗದೇ ಇರುವುದಕ್ಕೆ ಕಾರಣವಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಹೇಳಿದ್ದಾರೆ. 
ಭಾರತ-ಆಸಿಯಾನ್ ಆಂಡ್ ದಿ ಚೇಂಜಿಂಗ್ ಜಿಯೋ ಪೊಲಿಟಿಕ್ಸ್ ಎಂಬ ವಿಷಯದ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜೈಶಂಕರ್ ಗೆ ಸಿಕ್ಕಿಂ ಗಡಿ ಪ್ರದೇಶದಲ್ಲಿ ಉಂಟಾಗಿರುವ ಗಡಿ ವಿವಾದದ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ವೇಳೆ ಉತ್ತರಿಸಿರುವ ಅವರು, ಉಭಯ ದೇಶಗಳ ನಡುವೆ ಉದ್ದದ ಗಡಿ ಇದೆ, ಕಾಲ ಕಾಲಕ್ಕೆ ಭಿನ್ನಾಭಿಪ್ರಾಯಗಳೂ ಇರುತ್ತವೆ, ಭಾರತ-ಚೀನಾ ಈ ಹಿಂದೆಯೂ ಅನೇಕ ಗಡಿ ವಿವಾದಗಳನ್ನು ನಿರ್ವಹಿಸಿವೆ. ಈಗ ಅದು ಸಾಧ್ಯವಿಲ್ಲ ಎನ್ನುವುದಕ್ಕೆ ಕಾರಣಗಳಿಲ್ಲ ಎಂದು ಹೇಳಿದ್ದಾರೆ. 
ಸಿಕ್ಕಿಂ ನ ಡೋಕ್ಲಾಮ್ ಪ್ರದೇಶದಲ್ಲಿ ಚೀನಾ-ಭಾರತ ನಡುವೆ ಗಡಿ ವಿವಾದ ಉಂಟಾಗಿದ್ದು, ಭಾರತ ತನ್ನ ಸೇನಾ ಪಡೆಯನ್ನು ನಿಯೋಜಿಸಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com