ಟಿಬೆಟ್ ನಲ್ಲಿ ಚೀನಾ ಸೇನೆಯಿಂದ ಲೈವ್ - ಗುಂಡಿನ ದಾಳಿ, ಶಸ್ತ್ರಾಭ್ಯಾಸ

ಸಿಕ್ಕಿಂನ ಡೋಕಲಂನಲ್ಲಿ ಭಾರತ-ಚೀನಾ ಸೇನೆ ಮುಖಾಮುಖಿಯಾಗುವ ಮೂಲಕ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೀಜಿಂಗ್‌: ಸಿಕ್ಕಿಂನ ಡೋಕಲಂನಲ್ಲಿ ಭಾರತ-ಚೀನಾ ಸೇನೆ ಮುಖಾಮುಖಿಯಾಗುವ ಮೂಲಕ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಸಂದರ್ಭದಲ್ಲೇ ಚೀನಾ ಸೇನೆ ಟಿಬೆಟ್‌ ನಲ್ಲಿ ಶಸ್ತಾಸ್ತ್ರಗಳ ಅಭ್ಯಾಸ ನಡೆಸಿದ್ದು, ಭಾರಿ ಗುಂಡಿನ ಮಳೆ ಹರಿದಿರುವುದಾಗಿ ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಕಳೆದ ಶುಕ್ರವಾರ ಚೀನಾ ನೈಋತ್ಯ ಭಾಗದ 5,100 ಮೀಟರ್ ಎತ್ತರದ ಟಿಬೆಟ್‌ ಸ್ವಾಯತ್ತ ಪ್ರದೇಶದಲ್ಲಿ  ಪೀಪಲ್ಸ್‌ ಲಿಬರೇಷನ್‌ ಆರ್ಮಿ(ಪಿಎಲ್‌ಎ) ಶಸ್ತಾಸ್ತ್ರಗಳ ಅಭ್ಯಾಸ ನಡೆಸಿರುವುದಾಗಿ ಚೀನಾ ಸೆಂಟ್ರಲ್‌ ಟೆಲಿವಿಷನ್‌(ಸಿಸಿಟಿವಿ) ವರದಿ ಮಾಡಿದೆ. ಆದರೆ ಶಸ್ತ್ರಾಭ್ಯಾಸ ನಡೆದ ಸಮವನ್ನು ಸ್ಪಷ್ಟವಾಗಿ ತಿಳಿಸಿಲ್ಲ.
ಟ್ಯಾಂಕರ್‌ ನಾಶ ಪಡಿಸುವ ಗ್ರೆನೇಡ್‌ಗಳು, ಬಂಕರ್‌ಗಳನ್ನು ಸ್ಫೋಟಿಸಲು ಬಳಸುವ ಕ್ಷಿಪಣಿಗಳು ಹಾಗೂ ಯುದ್ಧ ವಿಮಾನಗಳಿಗೆ ಗುರಿಯಾಗಿಸಿ ನಾಶಪಡಿಸುವ ಸಾಮರ್ಥ್ಯ ಪರೀಕ್ಷೆ ನಡೆಸಿರುವುದು ವಿಡಿಯೋದಿಂದ ಸಿಸಿಟಿವಿ ತಿಳಿದುಬಂದಿದೆ.
ಜೂನ್‌ 16ರಂದು ಸಿಕ್ಕಿಂ ವಲಯದಲ್ಲಿ ಚೀನಾದ ಸೈನಿಕರು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಭಾರತೀಯ ಭದ್ರತಾ ಪಡೆ ತಡೆಯೊಡ್ಡಿತ್ತು. ಇದಾದ ನಂತರ ಡೋಕಲಂದಲ್ಲಿ ಉಭಯ ಸೇನೆಗಳ ನಡುವೆ ಘರ್ಷಣೆ ಸೃಷ್ಟಿಯಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com