ಉಗ್ರರು
ಉಗ್ರರು

ಸಿರಿಯಾ: ಕಾರ್ ಬಾಂಬ್ ಸ್ಫೋಟದಲ್ಲಿ 50 ಭಯೋತ್ಪಾದಕರು ಬಲಿ

ಸಿರಿಯಾದ ಹಿಬ್ಲಿಬ್ ನಗರದಲ್ಲಿ ಸಂಭವಿಸಿದ ಬಾಂಬ್ ದಾಳಿಯಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ 50 ಭಯೋತ್ಪಾದಕರು ಬಲಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ...
Published on
ಡಮಾಸ್ಕಸ್: ಸಿರಿಯಾದ ಹಿಬ್ಲಿಬ್ ನಗರದಲ್ಲಿ ಸಂಭವಿಸಿದ ಬಾಂಬ್ ದಾಳಿಯಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ 50 ಭಯೋತ್ಪಾದಕರು ಬಲಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 
ಯುದ್ಧ ಸಾಮಗ್ರಿಗಳನ್ನು ತುಂಬಿದ್ದ ಕಾರ್ ಅಲ್ ಖೈದಾದ ಅಂಗಸಂಸ್ಥೆ ನುಸ್ರಾದ ಉಗ್ರರು ಅಡಗಿದ್ದ ಸ್ಥಳದಲ್ಲಿ ಸ್ಫೋಟಗೊಂಡಿದೆ. ಈ ಹಿನ್ನೆಲೆಯಲ್ಲಿ 50 ಉಗ್ರರು ಮೃತಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದು ಇದೊಂದು ಪೂರ್ವ ನಿಯೋಜಿತ ಅಥವಾ ಆಕಸ್ಮಿಕ ಸ್ಫೋಟ ಎಂದು ಹೇಳಿದು ಬಂದಿಲ್ಲ. 
ಹಿಬ್ಲಿಬ್ ನಗರ ನುಸ್ರಾ ಉಗ್ರರ ಹಿಡಿತದಲ್ಲಿದ್ದು ಮತ್ತೊಂದು ಉಗ್ರ ಸಂಘಟನೆ ಅಹರ್ ಅಲ್-ಶಾಮ್ ತಮ್ಮ ಪಾರುಪತ್ಯ ಮೆರೆಯಲು ಹವಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಹರ್ ಅಲ್ ಶಾಮ್ ಉಗ್ರ ಸಂಘಟನೆ ಈ ಸ್ಫೋಟ ನಡೆಸಿದೆ ಎಂದು ಶಂಕಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com