ಮ್ಯಾನ್ ಬೂಕರ್ ಅವಾರ್ಡ್: ಮುಂಚೂಣಿಯಲ್ಲಿ ಅರುಂಧತಿ ರಾಯ್ ಹೆಸರು

ತಮ್ಮ ಮೊದಲ ಕಾದಂಬರಿ ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಗೆ ಬೂಕರ್ ಪ್ರಶಸ್ತಿ ಗಳಿಸಿದ್ದ ಅರುಂಧತಿ ರಾಯ್ ಈಗ ಮತ್ತೊಮ್ಮೆ ಬೂಕರ್ ಅವಾರ್ಡ್ ಕುರಿತಂತೆ ಸುದ್ದಿಯಲ್ಲಿದ್ದಾರೆ.
ಅರುಂಧತಿ ರಾಯ್
ಅರುಂಧತಿ ರಾಯ್
ಲಂಡನ್: ತಮ್ಮ ಮೊದಲ ಕಾದಂಬರಿ ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಗೆ ಬೂಕರ್ ಪ್ರಶಸ್ತಿ ಗಳಿಸಿದ್ದ ಅರುಂಧತಿ ರಾಯ್ ಈಗ ಮತ್ತೊಮ್ಮೆ ಬೂಕರ್ ಅವಾರ್ಡ್ ಕುರಿತಂತೆ ಸುದ್ದಿಯಲ್ಲಿದ್ದಾರೆ. 20 ವರ್ಷಗಳ ಹಿಂದೆ ಅಂದರೆ 1997ರಲ್ಲಿ ಭಾವನಾತ್ಮಕ,ಕಾಲ್ಪನಿಕ ಕಥಾನಕ ವಿಭಾಗದಲ್ಲಿ ಅರುಂಧತಿಗೆ ಬುಕರ್‌ ಪ್ರಶಸ್ತಿ ಲಭಿಸಿತ್ತು. ಈಗ ಅವರ ದಿ ಮಿನಿಸ್ಟ್ರಿ ಆಫ್ ಅಟ್ ಮೋಸ್ಟ್ ಹ್ಯಾಪಿನೆಸ್ ಕೃತಿಗಾಗಿ ಮತ್ತೊಮ್ಮೆ ಅರುಂಧತಿ ರಾಯ್ ಅವರ ಹೆಸರು ಮ್ಯಾನ್ ಬೂಕರ್ ಅವಾರ್ಡ್ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ. 
ಗಾರ್ಡಿಯನ್ ಪತ್ರಿಕೆ ಈ ಬಗ್ಗೆ ವರದಿ ಪ್ರಕಟಿಸಿದ್ದು, ಅರುಂಧತಿ ರಾಯ್ ಅವರ ಮಿನಿಸ್ಟ್ರಿ ಆಫ್ ಅಟ್ ಮೋಸ್ಟ್ ಹ್ಯಾಪಿನೆಸ್ ಪುಸ್ತಕ, ತೃತೀಯ ಲಿಂಗಿ ವ್ಯಕ್ತಿಯ ಕುರಿತಾಗಿದ್ದು, ಪ್ರಮುಖ ಪುಸ್ತಕ ಎಂದು ಬಣ್ಣಿಸಿದೆ.
ಮ್ಯಾನ್ ಬೂಕರ್ ಪ್ರಶಸ್ತಿ ನಿರ್ಣಯ ಸಮಿತಿ ಸುಮಾರು 150 ಕ್ಕಿಂತ ಹೆಚ್ಚಿನ ಕಾದಂಬರಿಗಳಿಂದ ಲೇಖಕರನ್ನು ಪಟ್ಟಿಗೆ ಆಯ್ಕೆ ಮಾಡಿದ್ದು, ಮಿನಿಸ್ಟ್ರಿ ಆಫ್ ಅಟ್ ಮೋಸ್ಟ್ ಹ್ಯಾಪಿನೆಸ್ ಕೃತಿಗಾಗಿ  ಅರುಂಧತಿ ರಾಯ್ ಹೆಸರು ಮುಂಚೂಣಿಯಲ್ಲಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com