ಡೋಕ್ಲಾಮ್ ಗಡಿ ವಿವಾದ ಎದುರಾಗಿರುವ ಸಂದರ್ಭದಲ್ಲೇ ಚೀನಾ ಅಧ್ಯಕ್ಷರನ್ನು ಎನ್ಎಸ್ಎ ಅಜಿತ್ ದೋವಲ್ ಭೇಟಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ. ಎನ್ಎಸ್ಎ ಅಜಿತ್ ದೋವಲ್ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ಬ್ರಿಕ್ಸ್ ರಾಷ್ಟ್ರಗಳ ಎನ್ಎಸ್ಎ ಗಳ ಸಭೆ ಬಗ್ಗೆ ಮಾತನಾಡಿರುವ ಕ್ಸಿ ಜಿನ್ ಪಿಂಗ್, ಭದ್ರತಾ ಸಹಕಾರವನ್ನು ವೃದ್ಧಿಸುವುದಕ್ಕೆ ಸದಸ್ಯ ರಾಷ್ಟ್ರಗಳ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.