ಗೂಗಲ್ ಮ್ಯಾಪ್
ಗೂಗಲ್ ಮ್ಯಾಪ್

ಖತಾರ್ ಜೊತೆಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಂಡ ಸೌದಿ, ಯುಎಇ, ಈಜಿಪ್ಟ್, ಬಹ್ರೈನ್

ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಖತಾರ್ ದೇಶದೊಂದಿಗಿನ ತಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುತ್ತಿರುವುದಾಗಿ...
ರಿಯಾದ್: ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಖತಾರ್  ದೇಶದೊಂದಿಗಿನ ತಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುತ್ತಿರುವುದಾಗಿ ಸೌದಿ ಅರೇಬಿಯ, ಈಜಿಪ್ಟ್, ಬಹ್ರೈನ್ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಪ್ರಕಟಿಸಿವೆ.
ಭಯೋತ್ಪಾದನೆ ಮತ್ತು ಉಗ್ರವಾದಗಳಿಂದ ತಂತಮ್ಮ ದೇಶದ ಭದ್ರತೆಯನ್ನು ರಕ್ಷಿಸಿಕೊಳ್ಳಲು ಸೌದಿ ಅರೇಬಿಯಾ ಖತಾರ್ ಜೊತೆಗಿನ ರಾಜ ತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುತ್ತಿರುವುದಾಗಿ ನ್ಯೂಸ್ ಎಜೆನ್ಸಿ ಎಸ್ ಪಿಎ ವರದಿ ಮಾಡಿದೆ.
ಖತಾರ್ ಜತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಲು ಕಡಿದುಕೊಳ್ಳಲು ರಿಯಾಧ್‌ ನಿರ್ಧರಿಸಿದ್ದು ಖತಾರ್ ಜತಗಿನ ಭೂ, ಸಮುದ್ರ ಗಡಿಗಳನ್ನು ಹಾಗೂ ವಾಯು ನಿಲ್ದಾಣಗಳನ್ನು ಮುಚ್ಚಲು ನಿರ್ಧರಿಸಲಾಗಿರುವುದಾಗಿ ಎಸ್‌ಪಿಎ ವರದಿ ಮಾಡಿದೆ.
ಖತಾರ್ ಆಡಳಿತದಿಂದ ಕಳೆದ ಕೆಲವು ವರ್ಷಗಳಿಂದ ಒಪ್ಪಂದ ಉಲ್ಲಂಘನೆ ಆಗುತ್ತಿರುವುದೇ ಈ ನಿರ್ಣಾಯಕ ಕ್ರಮಕ್ಕೆ ಕಾರಣ ಎಂದು ಸೌದಿ ಅರೇಬಿಯಾ ತಿಳಿಸಿದೆ. 
ಈಜಿಪ್ಟ್ ಕೂಡಾ ತನ್ನ ವಾಯುಮಾರ್ಗ ಹಾಗೂ ಬಂದರುಗಳನ್ನು ಖತಾರ್ ಪಾಲಿಗೆ ಮುಚ್ಚಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಖತಾರ್ ರಾಜತಾಂತ್ರಿಕ ಸಿಬ್ಬಂದಿಗಳಿಗೆ ದೇಶ ಬಿಡಲು 48 ಗಂಟೆಗಳ ಗಡುವು ನೀಡಿದೆ. ಬಹ್ರೇನ್ ಕೂಡಾ ರಾಜತಾಂತ್ರಿಕ ಸಿಬ್ಬಂದಿಗಳನ್ನು ದೇಶ ತೊರೆಯಲು ಸೂಚಿಸಿದೆ. ದೇಶದ ಭದ್ರತೆ ಬುಡಮೇಲಾಗುತ್ತಿದೆ. ಹೀಗಾಗಿ ಖತಾರ್  ಜೊತೆಗಿನ ಎಲ್ಲಾ ರೀತಿಯ ಸಂಬಂಧಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ.
ದೋಹಾದ ನಡೆಗಳು 'ಭಯೋತ್ಪಾದನಗೆ ಶಕ್ತಿ' ನೀಡುತ್ತಿವೆ. 'ಅಲ್ ಖೈದಾ ಮತ್ತು ಡಾಯಿಷ್ (ಇಸ್ಲಾಮಿಕ್ ಸ್ಟೇಟ್ -ಐಸಿಸ್)' ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂದು ಈ ನಾಲ್ಕು ದೇಶಗಳು ಆರೋಪಿಸಿವೆ.
2022ರಲ್ಲಿ ವಿಶ್ವ ಕಪ್‌ ಫ‌ುಟ್ಬಾಲ್‌ ಪಂದ್ಯಾವಳಿಯ ಆತಿಥ್ಯವನ್ನು ಖತಾರ್ ಪಡೆದುಕೊಂಡಿದೆ. ಇಸ್ಲಾಮಿಕ್‌ ಉಗ್ರರ ವಿರುದ್ಧದ ಹೋರಾಟದಲ್ಲಿ ಅಮೆರಿಕ ನೇತೃತ್ವದ ಮಿತ್ರಕೂಟದ ಓರ್ವ ಸದಸ್ಯ ದೇಶವಾಗಿದೆ. ಈಚಿನ ವರ್ಷಗಳಲ್ಲಿ ಖತಾರ್ ಇಸ್ಲಾಮಿಕ್‌ ಉಗ್ರರಿಗೆ ಹಣ ಇತ್ಯಾದಿ ನೆರವನ್ನು ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

Related Stories

No stories found.

Advertisement

X
Kannada Prabha
www.kannadaprabha.com