ಬ್ರಿಟನ್ ಸಂಸತ್ತಿಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ಮರು ಆಯ್ಕೆ

ಬೆಂಗಳೂರು ಮೂಲದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ...
ನಾರಾಯಣಮೂರ್ತಿ - ರಿಷಿ
ನಾರಾಯಣಮೂರ್ತಿ - ರಿಷಿ
ಲಂಡನ್: ಬೆಂಗಳೂರು ಮೂಲದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರು ಬ್ರಿಟನ್ ಸಂಸತ್ತಿಗೆ ಮರು ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ನಡೆದ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ ವೇಟಿವ್ ಪಕ್ಷದಿಂದ ಸ್ಪರ್ಧಿಸಿದ್ದ ಹಾಲಿ ಸಂಸದ ರಿಷಿ ಸುನಕ್ ಅವರು ಲೇಬರ್ ಪಕ್ಷದ ಅಭ್ಯರ್ಥಿ ಡ್ಯಾನ್ ಪೆರ್ರಿ ಅವರ ವಿರುದ್ಧ 23 ಸಾವಿರ ಮಂತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ರಿಷಿ ಸುನಕ್ ಸೇರಿದಂತೆ ಭಾರತೀಯ ಮೂಲದ 12 ಮಂದಿ ಈ ಬಾರಿ ಬ್ರಿಟನ್ ಸಂಸತ್ತಿಗೆ ಆಯ್ಕೆಯಾಗಿದ್ದು, ಕಳೆದ ಬಾರಿ ಗೆದ್ದ 10 ಮಂದಿಯ ಜೊತೆ ಹೊಸದಾಗಿ ಪಂಜಾಬ್ ಮೂಲದ ಶಿಖ್ ಮಹಿಳೆ ಪ್ರೀತ್ ಕೌರ್ ಗಿಲ್ ಹಾಗೂ ತನಮನ್ ಜೀತ್ ಸಿಂಗ್ ಅವರು ಗೆಲುವು ಸಾಧಿಸಿದ್ದಾರೆ. ಭಾರತೀಯ ಮೂಲದ ಒಟ್ಟು 56 ಮಂದಿ ಈ ಬಾರಿ ಬ್ರಿಟನ್ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದರು.
ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಹಾಗೂ ರಿಷಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com