ಹಗ್ಗದ ಸಹಾಯವಿಲ್ಲದೆ 29 ಅಂತಸ್ತಿನ ಕಟ್ಟಡ ಏರಿದ ಫ್ರೆಂಚ್ 'ಸ್ಪೈಡರ್ ಮ್ಯಾನ್'

ಹಾಲಿವುಡ್ ನ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದಾಗಿರುವ ಸ್ಪೈಡರ್ ಮ್ಯಾನ್ ಚಿತ್ರ ನೀವೆಲ್ಲಾ ನೋಡಿರುತ್ತೀರಿ. ಅದರಲ್ಲಿ ಸ್ಪೈಡರ್ ಮ್ಯಾನ್ ವೇಷಧಾರಿಯ ರೀಲ್ ಸಾಹಸಗಳನ್ನು...
ಅಲೈನ್ ರಾರ್ಬಟ್
ಅಲೈನ್ ರಾರ್ಬಟ್
ಹಾಲಿವುಡ್ ನ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದಾಗಿರುವ ಸ್ಪೈಡರ್ ಮ್ಯಾನ್ ಚಿತ್ರ ನೀವೆಲ್ಲಾ ನೋಡಿರುತ್ತೀರಿ. ಅದರಲ್ಲಿ ಸ್ಪೈಡರ್ ಮ್ಯಾನ್ ವೇಷಧಾರಿಯ ರೀಲ್ ಸಾಹಸಗಳನ್ನು ನೋಡಿರುತ್ತೀರಾ. ಆದರೆ ಇಲ್ಲೊಬ್ಬ ಆರೋಹಿ ಯಾವುದೇ ಹಗ್ದದ ಸಹಾಯವಿಲ್ಲದೆ 29 ಅಂತಸ್ತಿನ ಕಟ್ಟಡವನ್ನು ಹತ್ತುವ ಮೂಲಕ ರಿಯಲ್ ಸ್ಪೈಡರ್ ಮ್ಯಾನ್ ಎನಿಸಿಕೊಂಡಿದ್ದಾರೆ. 
ಬರ್ಸಿಲೊನಾದಲ್ಲಿರುವ 29 ಅಂತಸ್ತಿನ ಬರ್ಸಿಲೊನಾ ಸ್ಕೈ ಹೊಟೇಲ್ ಕಟ್ಟಡವನ್ನು 54 ವರ್ಷದ ಆರೋಹಿ ಅಲೈನ್ ರಾರ್ಬಟ್ ಬರೀ ಕೈಯಲ್ಲಿ ಕೇವಲ 20 ನಿಮಿಷಗಳಲ್ಲಿ ಏರುವ ಮೂಲಕ ಸಾದನೆ ಮಾಡಿದ್ದಾರೆ. 
ರಾರ್ಬಟ್ ಕಟ್ಟವನ್ನು ಏರಿರುವ ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ವೈರಲ್ ಆಗಿದೆ. ಇನ್ನು ರಾರ್ಬಟ್ ಯಾವುದೇ ಪರವಾನಗಿ ಪಡೆಯದೇ ಕಟ್ಟಡ ಏರಿರುವುದರಿಂದ ಕಟ್ಟಡವನ್ನು ಏರಿದ ಮೇಲೆ ಆತನನ್ನು ಪೊಲೀಸರು ಪ್ರಶ್ನಿಸಿದ್ದು ನಂತರ ಬಿಟ್ಟುಕಳುಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com