ಸಂಪ್ರದಾಯವಾದಿ ಸರ್ಬಿಯಾಗೆ ಮೊದಲ ಸಲಿಂಗಕಾಮಿ ಮಹಿಳಾ ಪ್ರಧಾನಮಂತ್ರಿ?

ಅತ್ಯಂತ ಸಂಪ್ರದಾಯವಾದಿ ದೇಶ ಎಂದು ಗುರುತಿಸಿಕೊಂಡಿರುವ ಸರ್ಬಿಯಾಗೆ ಸಲಿಂಗ ಕಾಮಿ ಮಹಿಳಾ ಪ್ರಧಾನಮಂತ್ರಿ ನೇಮಕವಾಗುವ...
ಅನಾ ಬ್ರನಾಬಿಕ್
ಅನಾ ಬ್ರನಾಬಿಕ್
ಬೀಜಿಂಗ್:  ಅತ್ಯಂತ ಸಂಪ್ರದಾಯವಾದಿ ದೇಶ ಎಂದು ಗುರುತಿಸಿಕೊಂಡಿರುವ ಸರ್ಬಿಯಾಗೆ ಸಲಿಂಗ ಕಾಮಿ ಮಹಿಳಾ ಪ್ರಧಾನಮಂತ್ರಿ ನೇಮಕವಾಗುವ ಸಾಧ್ಯತೆಯಿದೆ.
ಸರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವ್ಯೂವಿಕ್ 41 ವರ್ಷದ ಸಲಿಂಗ ಕಾಮಿ ಮಹಿಳೆ ಅನಾ ಬ್ರನಾಬಿಕ್ ಹೆಸರನ್ನು ಪ್ರಧಾನ ಮಂತ್ರಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ. ಮೊತ್ತ ಮೊದಲ ಮಹಿಳಾ ಪ್ರಧಾನಿಯಾಗಲಿರುವ ಅನಾ  ಸಂಪುಟಕ್ಕೆ ಮುಂದಿನ ವಾರ ಸಂಸತ್ತು ಅನುಮೋದನೆ ನೀಡಲಿದೆ.
ಸರ್ಬಿಯಾ ಮತ್ತು ಅಲ್ಲಿನ ನಾಗರಿಕರ ಹಿತದೃಷ್ಟಿಯಿಂದ ಇಂಥಹ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಉಗ್ರಗಾಮಿಯಾಗಿದ್ದು ನಂತರ ಪರಿವರ್ತನೆಯಾಗಿರುವ ಅಲೆಕ್ಸಾಂಡರ್ ವ್ಯಕ್ ಹೇಳಿದ್ದಾರೆ. ಸಲಿಂಗಕಾಮಿಗಳ ಹಕ್ಕುಗಳನ್ನು ಮತ್ತಷ್ಟು ಹೆಚ್ಚಿಸುವ ಭರವಸೆ ನೀಡಿದ್ದಾರೆ.
ಒಂದು ವೇಳೆ ನಾನು ಸಂಸತ್ತಿಗೆ ಆಯ್ಕೆ ಆದರೆ, ನಾನು ಸಂಪೂರ್ಣವಾಗಿ ನನ್ನನ್ನು ಸಮರ್ಪಿಸಿಕೊಂಡು ಸರ್ಕಾರ ನಡೆಸುತ್ತೇನೆ. ನನ್ ಕರ್ತವ್ಯವನ್ನು ಜವಾಬ್ದಾರಿಯಿಂದ ಪ್ರಾಮಾಣಿಕವಾಗಿ ಹಾಗೂ ಪ್ರೀತಿಯಿಂದ ಮಾಡುತ್ತೇನೆ ಎಂದು ಬ್ರಾನಬಿಕ್ ಹೇಳಿದ್ದಾರೆ.
ಆಕೆ ಉತ್ತಮ ವೃತ್ತಿ ಪರತೆಯುಳ್ಯ ವ್ಯಕ್ತಿ, ಆಕೆ ವೃತ್ತಿಪರ  ಕೌಶಲ್ಯ ಹಾಗೂ ವಯಕ್ತಿಕ ಗುಣಗಳ ಮೇಲೆ ನನಗೆ ನಂಬಿಕೆಯಿದೆ ಎಂದು ಸರ್ಬಿಯಾ ಅಧ್ಯಕ್ಷ ವ್ಯೂಕಿ ಅಭಿಪ್ರಾಯ ಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com