ಯುನಿಸೆಫ್ ಗುಡ್ ವಿಲ್ ರಾಯಭಾರಿಯಾಗಿ ಸಿರಿಯಾ ನಿರಾಶ್ರಿತೆ ಮುಜುನ್ ಅಲ್-ಮೆಲೆಹನ್ ನೇಮಕ

ಸಿರಿಯಾದ ನಿರಾಶ್ರಿತೆ ಮುಜುನ್ ಅಲ್-ಮೆಲೆಹನ್ ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ನ ಹೊಸ ಮತ್ತು....
ಮುಜುನ್ ಅಲ್-ಮೆಲೆಹನ್
ಮುಜುನ್ ಅಲ್-ಮೆಲೆಹನ್
ಯುನೈಟೆಡ್ ನೇಶನ್ಸ್: ಸಿರಿಯಾದ ನಿರಾಶ್ರಿತೆ ಮುಜುನ್ ಅಲ್-ಮೆಲೆಹನ್ ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ನ ಹೊಸ ಮತ್ತು ಅತಿ ಕಿರಿಯ ಗುಡ್ ವಿಲ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ವಿಶ್ವ ನಿರಾಶ್ರಿತರ ದಿನದ ಸಂದರ್ಭದಲ್ಲಿ ಈ ನೇಮಕಾತಿ ನಡೆದಿದ್ದು, 19 ವರ್ಷದ ಮಹಿಳಾ ಶೈಕ್ಷಣಿಕ ಕಾರ್ಯಕರ್ತೆ ಮುಜುನ್, ಅಧಿಕೃತ ನಿರಾಶ್ರಿತ ದರ್ಜೆಯ ಯುನಿಸೆಫ್ ನ ಮೊದಲ ರಾಯಭಾರಿ ಮುಜೂನ್ ಆಗಿದ್ದಾರೆ ಎಂದು ಕ್ಸಿನ್ಹುಆ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜೊರ್ಡನ್ ನ ಝಾತರಿ ನಿರಾಶ್ರಿತ ಶಿಬಿರದಲ್ಲಿ ವಾಸಿಸುತ್ತಿದ್ದಾಗ ಮಜುನ್ ಗೆ ಯುನಿಸೆಫ್ ನಿಂದ ಬೆಂಬಲ ಸಿಕ್ಕಿತ್ತು. ಇವರು ಯುನಿಸೆಫ್ ನಿಂದ ಬೆಂಬಲ ಪಡೆದಿದ್ದ ಗುಡ್ ವಿಲ್ ಅಂಬಾಸಿಡರ್ ಆಡ್ರೆ ಹೆಪ್ಬರ್ನ್ ಅವರ ತತ್ವಗಳನ್ನು ಅನುಸರಿಸುತ್ತಿದ್ದಾರೆ.
ಮಗುವಾಗಿದ್ದಾಗಲೇ ಶಿಕ್ಷಣದ ಮಹತ್ವ ನಮಗೆ ತಿಳಿದಿತ್ತು. ನಾನು ಸಿರಿಯಾದಿಂದ ಓಡಿ ಹೋದಾಗ ನನ್ನ ಬಳಿ ಶಾಲೆಯ ಪುಸ್ತಕಗಳು ಮಾತ್ರ ಇದ್ದವು ಎಂದು ಮುಝುನ್ ಹೇಳುತ್ತಾರೆ. ನಿರಾಶ್ರಿತಳಾದ ನಾನು ಮಕ್ಕಳನ್ನು ಕೆಲಸ ಮತ್ತು  ಬಾಲ್ಯ ವಿವಾಹಕ್ಕೆ ಒಳಪಡಿಸಿದಾಗ ಅವರ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ನನಗೆ ಗೊತ್ತಾಗಿದೆ.
ಮಕ್ಕಳು ಅಂತಹ ಸಂದರ್ಭದಲ್ಲಿ ಶಿಕ್ಷಣ ಮತ್ತು ಉತ್ತಮ ಭವಿಷ್ಯದಿಂದ ವಂಚಿತರಾಗುತ್ತಾರೆ.
ಜೂನ್ 20ನ್ನು ಪ್ರತಿವರ್ಷ ವಿಶ್ವ ನಿರಾಶ್ರಿತರ ದಿನ ಎಂದು ಆಚರಿಸಲಾಗುತ್ತದೆ. ವಿಶ್ವದಲ್ಲಿರುವ ಸಾವಿರಾರು ನಿರಾಶ್ರಿತರ ಶಕ್ತಿ, ಧೈರ್ಯ ಮತ್ತು ಪರಿಶ್ರಮವನ್ನು  ಅಂತಾರಾಷ್ಟ್ರೀಯ ಸಮುದಾಯ ನೆನಪಿಸುತ್ತದೆ. ಒತ್ತಾಯಪೂರ್ವಕವಾಗಿ ಓಡಿಹೋಗುವ ಕುಟುಂಬಗಳಿಗೆ ಜನರು ಬೆಂಬಲ ನೀಡಬೇಕೆಂಬುದು ಈ ವರ್ಷದ ವಿಶ್ವ ನಿರಾಶ್ರಿತರ ದಿನದ ಉದ್ದೇಶವಾಗಿದೆ.
ಮುಜುನ್ 2013ರಲ್ಲಿ ಸಂಘರ್ಷಪೀಡಿತ ಸಿರಿಯಾದಿಂದ ಓಡಿಹೋಗಿದ್ದರು. ಬ್ರಿಟನ್ ನಲ್ಲಿ ಮತ್ತೆ ನೆಲೆ ನಿಲ್ಲುವ ಮುನ್ನ ಜೋರ್ಡನ್ ನಲ್ಲಿ 3 ವರ್ಷ ನಿರಾಶ್ರಿತರಾಗಿ ಕಳೆದಿದ್ದರು. ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಬೇಕೆಂದು ಜಾತರಿ ಶಿಬಿರದಲ್ಲಿ ಹೋರಾಟ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com