ಫೀನಿಕ್ಸ್: ಹವಾಮಾನ ವೈಪರೀತ್ಯ, ಮಂಜು ಕವಿದ ವಾತಾವರಣ ಸಂದರ್ಭದಲ್ಲಿ ವಿಮಾನ ಹಾರಾಟ ನಿಲ್ಲುವುದನ್ನು ಕಂಡಿರಬಹುದು. ಆದರೆ ಫೀನಿಕ್ಸ್ ನಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದರಿಂದ ವಿಮಾನ ಹಾರಾಟ ರದ್ದ ಮಾಡಲಾಗಿದೆ.
ಬಿಸಿಲಿನ ತಾಪ ಏರಿಕೆಯಿಂದಾಗಿ ವಿಮಾನಗಳ ಹಾರಾಟವನ್ನು ನಿಲ್ಲಿಸಲು ಫೀನಿಕ್ಸ್ ನಿರ್ಧರಿಸಿದೆ. ಫೀನಿಕ್ಸ್ ನಲ್ಲಿ ಬೇಸಿಗೆಯಲ್ಲಿ ಅತಿಯಾದ ಬಿಸಿಲು ಇರುತ್ತದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು ಇದರಿಂದ ವಿಮಾನ ಹಾರಾಟವನ್ನು ರದ್ದು ಮಾಡಿದೆ.
ಫೀನಿಕ್ಸ್ ನಲ್ಲಿ ಬಿಸಿಲಿನ ತಾಪ ತೀವ್ರಗೊಂಡಿದ್ದು ಸೋಮವಾರ 118 ಡಿಗ್ರಿ ಫ್ಯಾರೆನ್ ಹೀಟ್ ತಾಪಮಾನ ತಲುಪಿತ್ತು. ಇದು ತುಂಬಾ ಬಿಸಿಯಾಗಿದೆ ಎಂದು ಪ್ರಾದೇಶಿಕ ಹವಾಮಾನ ತಜ್ಞರು ಟ್ವೀಟ್ ಮಾಡಿದ್ದರು. ಇದರಿಂದಾಗಿ ಫೀನಿಕ್ಸ್ ಸ್ಕೈ ಹಾರ್ಬರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 50 ವಿಮಾನಗಳ ಈ ವಾರದ ಹಾರಾಟವನ್ನು ರದ್ದುಮಾಡಲಾಗಿದೆ.