ಚೀನಾದವರಿಗೆ ವೀಸಾ ನಿಯಮಗಳನ್ನು ಕಠಿಣಗೊಳಿಸಿದ ಪಾಕಿಸ್ತಾನ!

ಕ್ವೆಟ್ಟಾದಲ್ಲಿ ಚೀನಾ ದೇಶಿಗರ ಹತ್ಯೆ ನಡೆದ ನಂತರ ಪಾಕಿಸ್ತಾನ ವೀಸಾ ನಿಯಮಗಳನ್ನು ಕಠಿಣಗೊಳಿಸಲು ನಿರ್ಧರಿಸಿದೆ. ಚೀನಾ ಪ್ರಜೆಗಳಿಗೆ ವೀಸಾ ನಿಯಮಗಳನ್ನು ಕಠಿಣಗೊಳಿಸಲು ಆಂತರಿಕ ಸಚಿವ ನಾಸಿರ್ ಅಲಿ....
ಚೀನಾ ಪ್ರಜೆಗಳು
ಚೀನಾ ಪ್ರಜೆಗಳು
ಇಸ್ಲಾಮಾಬಾದ್: ಕ್ವೆಟ್ಟಾದಲ್ಲಿ ಚೀನಾ ದೇಶಿಗರ ಹತ್ಯೆ ನಡೆದ ನಂತರ ಪಾಕಿಸ್ತಾನ ವೀಸಾ ನಿಯಮಗಳನ್ನು ಕಠಿಣಗೊಳಿಸಲು ನಿರ್ಧರಿಸಿದೆ. ಚೀನಾ ಪ್ರಜೆಗಳಿಗೆ ವೀಸಾ ನಿಯಮಗಳನ್ನು ಕಠಿಣಗೊಳಿಸಲು ಆಂತರಿಕ ಸಚಿವ ನಾಸಿರ್ ಅಲಿ ಖಾನ್ ನೇತೃತ್ವಾ ಪಾಕ್ ನಿರ್ಧರಿಸಿದ್ದು, ಮಾಧ್ಯಮಗಳಿಗೆ ಈ ಬಗ್ಗೆ ಸ್ಪಷ್ಟಪಡಿಸಲಾಗಿದೆ. 
ಚೀನಾ ಪ್ರಜೆಗಳಿಗೆ ವೀಸಾ ನೀಡುವ ನಿಯಮಗಳನ್ನು ಮರುಪರಿಶೀಲನೆ ನಡೆಸಲು ಕರೆದಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚೆಗಷ್ಟೇ ಚೀನಾದ ಇಬ್ಬರು ಪ್ರಜೆಗಳನ್ನು ಪಾಕಿಸ್ತಾನದ ಬಲೂಚಿಸ್ಥಾನದಲ್ಲಿ ಹತ್ಯೆ ಮಾಡಲಾಗಿತ್ತು. ಈ ಬೆನ್ನಲ್ಲೇ ಪಾಕಿಸ್ತಾನ ವೀಸಾ ನಿಯಮಗಳನ್ನು ಕಠಿಣಗೊಳಿಸುವ ನಿರ್ಧಾರ ಕೈಗೊಂಡಿದೆ. 
ಬ್ಯುಸಿನೆಸ್ ವೀಸಾ ಹಾಗೂ ಆಗಮನದ ವೀಸಾಗಳನ್ನು ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಅನುಮೋದನೆ ನಂತರವಷ್ಟೇ ವೀಸಾ ನೀಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com