ಲಿಸ್‌ಬನ್: ಪ್ರಧಾನಿ ನರೇಂದ್ರ ಮೋದಿ ಅವರ ಮೂರು ರಾಷ್ಟ್ರಗಳ ವಿದೇಶ ಪ್ರವಾಸ ಆರಂಭವಾಗಿದ್ದು, ಮೊದಲ ದಿನವಾದ ಶನಿವಾರ ಪೋರ್ಚುಗಲ್ ಗೆ ಭೇಟಿ ನೀಡಿದ್ದಾರೆ. ಬಳಿಕ ಅಮೆರಿಕ ಹಾಗೂ ನೆದರ್ಲ್ಯಾಂಡ್ ಗೆ ಭೇಟಿ ನೀಡಲಿದ್ದಾರೆ.
ಇಂದು ಲಿಸ್ ಬನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಪೋರ್ಚುಗಲ್ ವಿದೇಶಾಂಗ ಸಚಿವ ಆಗಸ್ಟೋಸ್ಯಾಂಟಸ್ ಸಿಲ್ವಾ ಅವರು ಅದ್ಧೂರಿಯಾಗಿ ಬರಮಾಡಿಕೊಂಡರು. ಭಾರತೀಯ ಪ್ರಧಾನಿಯೊಬ್ಬರ ಐರೋಪ್ಯ ದೇಶದ ಮೊತ್ತ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ.
ಬಳಿಕ ಪ್ರಧಾನಿ ಮೋದಿ ಅವರು ಪೋರ್ಚುಗೀಸ್ ಪ್ರಧಾನಿ ಅಂಟೋನಿಯೋ ಕೋಸ್ಟಾ ಅವರನ್ನು ಭೇಟಿಯಾದರು. ಉಭಯ ರಾಷ್ಟ್ರಗಳ ನಾಯಕರು ವಿವಿಧ ಕ್ಷೇತ್ರಗಳಲ್ಲಿನ ಜಂಟಿ ಯೋಜನೆಗಳ ಪ್ರಗತಿಯನ್ನು ಅವಲೋಕಿಸುವರಲ್ಲದೆ ಹೊಸ ಯೋಜನೆಯಗಳ ನಿರ್ಧಾರಗಳನ್ನು ತೆಗೆದುಕೊಳ್ಳುವರು ಎಂದು ಮೂಲಗಳು ತಿಳಿಸಿವೆ.
ಪೋರ್ಚುಗೀಸ್ ಪ್ರಧಾನಿ ಅಂಟೋನಿಯೋ ಕೋಸ್ಟಾ ಅವರು ಮೂಲತಃ ಭಾರತದ ಗೋವೆಯವರಾಗಿದ್ದು ಈ ವರ್ಷ ಜನವರಿಯಲ್ಲಿ ಅವರು ಭಾರತಕ್ಕೆ ಭೇಟಿ ನೀಡಿದ್ದರು.