ಟ್ರಂಪ್ ಮಾರ್ಗದರ್ಶನದಲ್ಲಿ ಶ್ವೇತಭವನದಲ್ಲಿರುವ ಅಮೆರಿಕ ಅಧ್ಯಕ್ಷರ ನಿವಾಸವನ್ನು ವೀಕ್ಷಿಸಿದ ಪ್ರಧಾನಿ ಮೋದಿ, ಅಮೆರಿಕದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಮುಖ ಸಚಿವರೊಂದಿಗೆ ಔತಣಕೂಟದಲ್ಲಿ ಭಾಗಿಯಾಗಿದ್ದರು. ಅಮೆರಿಕದ ಆತಿಥ್ಯದ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫಸ್ಟ್ ಲೇಡಿ ಮಿಲೇನಿಯಾ ಟ್ರಂಪ್ ಅವರ ಆಹ್ವಾನ, ಆತಿಥ್ಯಕ್ಕೆ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಅಮೆರಿಕಾದಲ್ಲಿ ಕೇವಲ ಕೆಲವೇ ಕಾಲ ಇದ್ದರೂ, ನಮ್ಮ ದೇಶದಲ್ಲಿದ್ದೇನೆ ಎನಿಸಿತ್ತು. ಅಮೆರಿಕ ನನಗೆ ತೋರಿರುವ ಗೌರವ, ಆತಿಥ್ಯವೆಲ್ಲವೂ ಕೇವಲ ನನಗಷ್ಟೇ ಅಲ್ಲ, 1.25 ಬಿಲಿಯನ್ ಭಾರತೀಯರಿಗೆ ಸಲ್ಲುತ್ತದೆ, ಅಮೆರಿಕದ ಆತಿಥ್ಯಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಮೋದಿ ಹೇಳಿದ್ದಾರೆ.