ಹೆಚ್-1ಬಿ ವೀಸಾದ ತ್ವರಿತ ಪ್ರಕ್ರಿಯೆ ತಾತ್ಕಾಲಿಕ ರದ್ದು ಮಾಡಿದ ಅಮೆರಿಕಾ

ವಿದೇಶಿ ನುರಿತ ಕೆಲಸಗಾರರನ್ನು ಐಟಿ ಕಂಪೆನಿಗಳು ನೇಮಕಾತಿ ಮಾಡಲು ಬಳಸುವ ತ್ವರಿತ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೊಲಂಬಿಯಾ: ವಿದೇಶಿ ನುರಿತ ಕೆಲಸಗಾರರನ್ನು ಐಟಿ ಕಂಪೆನಿಗಳು ನೇಮಕಾತಿ ಮಾಡಲು ಅಧಿಕ ಮೌಲ್ಯ ಕೊಟ್ಟು ಬಳಸುವ ಹೆಚ್-1ಬಿ ತ್ವರಿತ ವೀಸಾಗಳನ್ನು ನೀಡುವ ಪ್ರಕ್ರಿಯೆಗೆ ಅಮೆರಿಕಾ ತಾತ್ಕಾಲಿಕ ತಡೆ ನೀಡಿದೆ.
ಅಮೆರಿಕನ್ನರಿಗೆ ಹೆಚ್ಚು ಉದ್ಯೋಗ ಒದಗಿಸಿಕೊಡುವುದಕ್ಕೆ ಪ್ರಾಮುಖ್ಯತೆ ನೀಡುವ ಸಲುವಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ನಡೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಕೂಡ ವೀಸಾದ  ತಾತ್ಕಾಲಿಕ ತಡೆ ಕ್ರಮ ಇಡೀ ಪ್ರಕ್ರಿಯೆಯ ಸಮಯವನ್ನು ಕಡಿಮೆ ಮಾಡಲು ಸಹಾಯವಾಗಲಿದೆ.
ಅಮೆರಿಕಾ ಪ್ರತಿವರ್ಷ ವಿದೇಶಿ ನುರಿತ ಸಹಸ್ರಾರು ಕೆಲಸಗಾರರಿಗೆ  ಹೆಚ್-1ಬಿ ವೀಸಾ ನೀಡುತ್ತದೆ. ಹೆಚ್ -1ಬಿ ವೀಸಾಕ್ಕೆ ಅರ್ಜಿ ಹಾಕಿದ ಮೇಲೆ ವೀಸಾ ಸಿಗಲು ಅನೇಕ ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ಅದನ್ನು ತ್ವರಿತವಾಗಿ 15 ದಿನಗಳಲ್ಲಿ 1,225 ಡಾಲರ್ ಗೆ ನೀಡುವ ಸೌಲಭ್ಯವಿತ್ತು. ಆದರೆ ಇದೀಗ ಆ ಸೌಲಭ್ಯವನ್ನು 6 ತಿಂಗಳವರೆಗೆ ರದ್ದು ಮಾಡಲಾಗಿದೆ ಎಂದು ಅಮೆರಿಕಾ ನಾಗರಿಕತ್ವ ಮತ್ತು ವಲಸೆ ಸೇವೆ(ಯುಎಸ್ ಸಿಐಎಸ್) ತಿಳಿಸಿದೆ.
ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರದ ವೇಳೆ ಮತ್ತು ಅಧ್ಯಕ್ಷರಾಗಿ ಆಯ್ಕೆಯಾದ ನಂತರವೂ ಹೆಚ್-1ಬಿ ವೀಸಾ ಭಾರೀ ಪ್ರಚಾರ ಪಡೆದುಕೊಂಡಿತ್ತು. ಈ ವೀಸಾವನ್ನು ವಿದೇಶಗಳ ಎಂಜಿನಿಯರ್, ವೈದ್ಯರು, ಕಂಪ್ಯೂಟರ್ ಕೆಲಸಗಾರರು ಮತ್ತು ಇತರ ನುರಿತ ಕೆಲಸಗಾರರು ಬಳಸುತ್ತಾರೆ. 
ಅಮೆರಿಕಾ ಸರ್ಕಾರ ಪ್ರತಿವರ್ಷ ಸುಮಾರು 85,000 ಹೆಚ್-1ಬಿ ವೀಸಾ ನೀಡುತ್ತದೆ. ಭಾರತದ ಹೊರಗುತ್ತಿಗೆ ಕಂಪೆನಿಗಳು ಪ್ರತಿವರ್ಷ ಈ ವೀಸಾವನ್ನು ಹೆಚ್ಚು ಬಳಸಿಕೊಳ್ಳುತ್ತವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com