ಚೀನಾ ತೀವ್ರವಾದಿಗಳ ಮೆದುಳಿನ ಕೆಲ ಭಾಗಗಳು ಕಾಣೆಯಾಗಿವೆ: ದಲೈ ಲಾಮ

ಚೀನಾ ತೀವ್ರವಾದಿಗಳ ಬಗ್ಗೆ ಬೌದ್ಧ ಧರ್ಮಗುರು ದಲೈ ಲಾಮ ಅಸಮಾಧಾನ ವ್ಯಕ್ತಪಡಿಸಿದ್ದು, ತೀವ್ರವಾದಿಗಳ ಮೆದುಳಿನ ಕೆಲ ಭಾಗಗಳು ಕಾಣೆಯಾಗಿವೆ ಎಂದು ದಲೈ ಲಾಮ ಹೇಳಿದ್ದಾರೆ.
ದಲೈ ಲಾಮ
ದಲೈ ಲಾಮ
ಬೀಜಿಂಗ್: ಚೀನಾ ತೀವ್ರವಾದಿಗಳ ಬಗ್ಗೆ ಬೌದ್ಧ ಧರ್ಮಗುರು ದಲೈ ಲಾಮ ಅಸಮಾಧಾನ ವ್ಯಕ್ತಪಡಿಸಿದ್ದು, ತೀವ್ರವಾದಿಗಳ ಮೆದುಳಿನ ಕೆಲ ಭಾಗಗಳು ಕಾಣೆಯಾಗಿವೆ ಎಂದು ದಲೈ ಲಾಮ ಹೇಳಿದ್ದಾರೆ. 
ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ದಲೈ ಲಾಮ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಟಿಬೆಟ್ ನ ವಿಮೋಚನೆಗಾಗಿ ತಾವು ಹಿಂಸೆಯನ್ನು ಎಂದಿಗೂ ಉತ್ತೇಜಿಸಿಲ್ಲ ಎಂದು ದಲೈ ಲಾಮ ಸ್ಪಷ್ಟಪಡಿಸಿದ್ದು, ಟಿಬೆಟ್ ಗೆ ನಿಜವಾದ, ಸ್ವಾಭಾವಿಕ ಸ್ವಾಯತ್ತತೆ ಸಿಗಬೇಕೆಂದು ಹೇಳಿದ್ದಾರೆ. ಹಿರಿಯ ಲಾಮ ಓರ್ವರ ಆತ್ಮ ಬಾಲಕಾಗಿ ಮರುಜೀವ ಪಡೆದಿದೆ ಎಂದು ಹೇಳಿರುವ ದಲೈ ಲಾಮ, ಚೀನಾ ಈ ಪರಂಪರೆ ಮುಂದುವರಿಯಬೇಕು ಎಂದು ಹೇಳುತ್ತದೆ. ಆದರೆ ಚೀನಾದ ಅಧಿಕೃತ ನಾಸ್ತಿಕ ಕಮ್ಯುನಿಷ್ಟ್ ನಾಯಕರು ದಲೈ ಲಾಮ ಉತ್ತರಾಧಿಕಾರಿಯನ್ನು ನಿರ್ಧರಿಸುವ ಹಕ್ಕು ಹೊಂದಿದ್ದಾರೆ. ನಾನೇ ಕೊನೆಯ ದಲೈ ಲಾಮ ಆಗುವ ಸಾಧ್ಯತೆಯೂ ಇದೆ, ಕೊನೆಯ ದಲೈ ಲಾಮ ಆದರೂ ಸಹ ಸಂತೋಷವೇ ಎಂದು ದಲೈ ಲಾಮ ಹೇಳಿದ್ದಾರೆ. 
ಒಂದು ವೇಳೆ ಚೀನಾ ತನ್ನದೇ ಆದ ಧರ್ಮ ಗುರುವನ್ನು ನೇಮಕ ಮಾಡಿದರೆ..? ಎಂಬ ಪ್ರಶ್ನೆಗೆ ಉತ್ತರಿಸಿರುವ ದಲೈ ಲಾಮ, ಹಾಗೆ ಮಾಡುವುದು ಮೂರ್ಖತನ ನಮ್ಮ ಮೆದುಳಿಗೆ ಸಾಮಾನ್ಯ ಜ್ಞಾನವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿದೆ. ಆದರೆ ಚೀನಾ ತೀವ್ರವಾದಿಗಳ ಮೆದುಳಿನ ಕೆಲ ಭಾಗಗಳು ಕಾಣೆಯಾಗಿವೆ ಎಂದು ದಲೈ ಲಾಮ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com