ಇಸ್ತಾನ್‌ಬುಲ್: ಇಸ್ತಾನ್‌ಬುಲ್ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ವೊಂದು ದೂರದರ್ಶನ ಟವರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪತನಗೊಂಡಿದ್ದು ಐವರು ಸಾವನ್ನಪ್ಪಿದ್ದಾರೆ.
ಖಾಸಗಿ ಕಂಪನಿಗೆ ಸೇರಿದ ಹೆಲಿಕಾಪ್ಟರ್ ನಾಲ್ವರು ರಷ್ಯಾದ ಅತಿಥಿ ಮತ್ತು ಟರ್ಕಿಶ್ ಅಧಿಕಾರಿ ಮತ್ತು ಇಬ್ಬರು ಪೈಲಟ್ ಗಳು ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದು ಪತನದಲ್ಲಿ ಐವರು ಸಾವನ್ನಪ್ಪಿದ್ದಾರೆ.
ಇಸ್ತಾನ್‌ಬುಲ್ ಅಟಾಟುರ್ಕ್ ನಲ್ಲಿ ಟೇಕ್ ಆಫ್ ಆಗಿದ್ದ ಹೆಲಿಕಾಪ್ಟರ್ ಬುಯುಕ್ಸೆಕ್ಮೆಸ್ ಜಿಲ್ಲೆಯಲ್ಲಿ ಪತನಗೊಂಡಿದ್ದು, ಪ್ರಕರಣವನ್ನು ತನಿಖೆಗೆ ಆಗ್ರಹಿಸಲಾಗಿದೆ.