ದೆವ್ವದ ಕಾಟಕ್ಕೆ ಹೆದರಿ ಅಧಿಕೃತ ಬಂಗಲೆ ತೊರೆದ ಬ್ರೆಜಿಲ್ ಅಧ್ಯಕ್ಷ

ದೆವ್ವದ ಕಾಟಕ್ಕೆ ಹೆದರಿ ಬ್ರೆಜಿಲ್ ಅಧ್ಯಕ್ಷ ಮೈಕೆಲ್‌ ಟೆಮರ್‌ ರಾಜಧಾನಿ ಬ್ರೆಸಿಲಿಯಾದಲ್ಲಿನ ತಮ್ಮ ಐಷಾರಾಮಿ ಬಂಗಲೆಯನ್ನು..
ಮೈಕೆಲ್‌ ಟೆಮರ್‌
ಮೈಕೆಲ್‌ ಟೆಮರ್‌

ಬ್ರೆಜಿಲ್: ದೆವ್ವದ ಕಾಟಕ್ಕೆ ಹೆದರಿ ಬ್ರೆಜಿಲ್ ಅಧ್ಯಕ್ಷ ಮೈಕೆಲ್‌ ಟೆಮರ್‌ ರಾಜಧಾನಿ ಬ್ರೆಸಿಲಿಯಾದಲ್ಲಿನ ತಮ್ಮ ಐಷಾರಾಮಿ ಬಂಗಲೆಯನ್ನು ತೊರೆದಿದ್ದಾರೆ.

ಅಲ್ವೊರಾಡಾ ಪ್ಯಾಲೇಸ್‌ನಿಂದ ಅವರೀಗ ಪತ್ನಿ ಮತ್ತು 7 ವರ್ಷದ ಮಗನೊಂದಿಗೆ ಸಮೀಪದ ಪುಟ್ಟ ಬಂಗಲೆ ಜಬುರು ಪ್ಯಾಲೇಸ್‌ಗೆ ಸ್ಥಳಾಂತರಗೊಂಡಿದ್ದಾರೆ.

ನನಗಲ್ಲಿ ವಿಚಿತ್ರ ಅನುಭವವಾಯಿತು. ಮೊದಲ ದಿನದಿಂದಲೂ ನನಗೆ ಅಲ್ಲಿ ಸರಿಯಾಗಿ ನಿದ್ರಿಸಲು ಆಗಲಿಲ್ಲ. ನನ್ನ ಪತ್ನಿ ಮರ್ಸೆಲಾಗೆ ಕೂಡ ಇದೇ ಅನುಭವವಾಗಿದೆ ಎಂದು ಮೈಕೆಲ್‌ ಹೇಳಿದ್ದಾರೆ.

ಮನೆಯಲ್ಲಿ ದೆವ್ವವೇನಾದರೂ ಇರಬಹುದಾ? ಎಂದೂ ನಾವೂ ಆಲೋಚಿಸಲಾರಂಭಿಸಿದೆವು ಎಂದು ಹೇಳಿದ್ದಾಗಿ ಬ್ರೆಜಿಲ್‌ನ ನಿಯತಕಾಲಿಕೆ ವರದಿ ಮಾಡಿದೆ.

ದುಷ್ಟಶಕ್ತಿ ಹೊಡೆದೋಡಿಸಲು ಅಧ್ಯಕ್ಷರ ಪತ್ನಿ ಮಂತ್ರವಾದಿಯನ್ನೂ ಕರೆಸಿದ್ದರಂತೆ. ಆದರೂ ಆ ದೆವ್ವ ಹೋಗಿಲ್ಲದ ಕಾರಣಕ್ಕಾಗಿ ಕಡೆಯದಾಗಿ ನಿವಾಸವನ್ನೇ ಖಾಲಿ ಮಾಡುವ ನಿರ್ಧಾರಕ್ಕೆ ಬಂದಿದ್ದಾರಂತೆ. ಹೀಗಾಗಿ ಅಷ್ಟೇನೂ ದೊಡ್ಡದಲ್ಲದ, ಆದರೂ ವೈಭವಕ್ಕೆ ಕಡಿಮೆ ಇಲ್ಲದ ಉಪಾಧ್ಯಕ್ಷರಿಗೆ ಮೀಸಲಾಗಿದ್ದ  ಪ್ಯಾಲೇಸ್‌ಗೆ ಈ ವಿಐಪಿ ದಂಪತಿ ತೆರಳಿದ್ದಾರೆ.

ಇನ್ನೂ ವಿಶೇಷವೆಂದರೆ, ಅಧ್ಯಕ್ಷರ ಬಂಗ್ಲೆಯಲ್ಲಿ ಇತ್ತೀಚಿನ ವರೆಗೆ ಹಿಂದಿನ ಅಧ್ಯಕ್ಷೆ ಡಿಲ್ಮಾ ರೌಸೆಫ್ ವಾಸವಾಗಿದ್ದರು. ಆದರೆ, ಇವರನ್ನು ವಾಗ್ಧಂಡನೆ ಮೂಲಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ರೌಸೆಫ್ ಅಧ್ಯಕ್ಷರಾಗಿದ್ದ ವೇಳೆ ಮೈಕೆಲ್‌ ಉಪಾಧ್ಯಕ್ಷರಾಗಿದ್ದ ಕಾರಣ, ಜಬರು ಪ್ಯಾಲೇಸ್‌ನಲ್ಲಿ ವಾಸವಿದ್ದರು. ಇವರು ಅಧ್ಯಕ್ಷರಾಗಿ ತೆರಳಿದ ಮೇಲೆ ಅಲ್ವೋರೆಡಾ ಪ್ಯಾಲೇಸ್‌ಗೆ ಶಿಫ್ಟ್ ಆಗಿದ್ದರು. ಈ ನಿವಾಸ ಖಾಲಿಯೇ ಇತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com