ನೇಪಾಳ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಮದೇಸಿ ಮೋರ್ಚ

ನೇಪಾಳದಲ್ಲಿ ಪ್ರತಿಭಟನೆ ನಡೆಸುತ್ತಿರುವ ಮದೇಸಿ ಮೋರ್ಚ ಅಲ್ಲಿನ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದೆ.
ನೇಪಾಳ
ನೇಪಾಳ
ಕಠ್ಮಂಡು: ನೇಪಾಳದಲ್ಲಿ ಪ್ರತಿಭಟನೆ ನಡೆಸುತ್ತಿರುವ ಮದೇಸಿ ಮೋರ್ಚ ಅಲ್ಲಿನ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದೆ. 
7 ರಾಜಕೀಯ ಪಕ್ಷಗಳ ಒಕ್ಕೂಟವಾ ಮದೇಸಿ ಮೋರ್ಚ ತನ್ನ ವಿವಿಧ ಬೇಡಿಕೆಗಳನ್ನು ಈಡೇರಿಸಲು ನೇಪಾಳ ಸರ್ಕಾರಕ್ಕೆ ಒಂದು ವಾರಗಳ ಕಾಲಾವಕಾಶ ನೀಡಿತ್ತು. ಆದರೆ ನೀಡಿದ್ದ ಗಡುವು ಮುಕ್ತಾಯಗೊಂಡರೂ ಸರ್ಕಾರದಿಂದ ಬೇಡಿಕೆಗಳು ಈಡೇರದ ಕಾರಣ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ (ಪ್ರಚಂಡ) ನೇತೃತ್ವದ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆದಿದೆ. 
ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿರುವ ಬಗ್ಗೆ ಅಲ್ಲಿನ ಸಂಸತ್ ನ ಸಭಾಧ್ಯಕ್ಷರಿಗೆ ಪತ್ರ ಬರೆದಿರುವ ಮದೇಸಿ ಮೋರ್ಚ ವಿಪಕ್ಷ ಸ್ಥಾನದಲ್ಲಿರಲು ತೀರ್ಮಾನಿಸಿರುವುದಾಗಿ ಹೇಳಿದ್ದು, ಸರಣಿ ಪ್ರತಿಭಟನೆಗಳನ್ನು ನಡೆಸಲು ನಿರ್ಧರಿಸಿದೆ ಎಂದಿದೆ.  ಸಂಸತ್ ನಲ್ಲಿ 39 ಸದಸ್ಯರನ್ನು ಹೊಂದಿರುವ ಮದೇಸಿ ಮೋರ್ಚಾ ಬೆಂಬಲ ಹಿಂಪಡೆದಿದ್ದರೂ, ಸ್ಪಷ್ಟ ಬಹುಮತ ಹೊಂದಿರುವ ಪ್ರಚಂಡ ಸರ್ಕಾರಕ್ಕೆ ತಕ್ಷಣವೇ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com