
ಲಂಡನ್: ಬ್ರಿಟನ್ನಿನಲ್ಲಿರುವ ಏಷ್ಯಾ ಮೂಲದ ಅತಿ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಭಾರತೀಯ ಉದ್ಯಮಿ ಭಾರತ ಮೂಲದ ಹಿಂದೂಜಾ ಸಹೋದರರು ಈ ಬಾರಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ.
2017ನೇ ಸಾಲಿನ ‘ಬ್ರಿಟನ್‌ನಲ್ಲಿರುವ ಏಷ್ಯಾದ 101 ಶ್ರೀಮಂತರ ಪಟ್ಟಿ’ ಯನ್ನು ಏಷಿಯನ್ ಮೀಡಿಯಾ ಅಂಡ್ ಮಾರ್ಕೆಟ್ ಸಂಸ್ಥೆ ಸಿದ್ಧಪಡಿಸಿದ್ದು, ಜಿ.ಪಿ. ಹಿಂದೂಜಾ ಮತ್ತು ಎಸ್.ಪಿ. ಹಿಂದೂಜಾ ಸಹೋದರರು 19 ಬಿಲಿಯನ್ ಪೌಂಡ್ ಆಸ್ತಿ ಹೊಂದುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೇ ಈ ಬಾರಿ ಅವರ ಆಸ್ತಿಯಲ್ಲಿ 2.5 ಬಿಲಿಯನ್ ಪೌಂಡ್ ಹಣ ಹೆಚ್ಚಿದೆ.
ಉಕ್ಕು ಉದ್ಯಮದ ದಿಗ್ಗಜ ಲಕ್ಷ್ಮಿ ಎನ್. ಮಿತ್ತಲ್ 12.6 ಬಿಲಿಯನ್ ಆಸ್ತಿ ಹೊಂದುವ ಮೂಲಕ 2ನೇ ಸ್ಥಾನ ಗಳಿಸಿಕೊಂಡಿದ್ದಾರೆ. ಕಳೆದ ವರ್ಷ ಇವರ ಒಟ್ಟು ಆಸ್ತಿ ಮೌಲ್ಯ 6.4 ಬಿಲಿಯನ್ ಪೌಂಡ್ ಇತ್ತು.
ಹಿಂದೂಜಾ ಸಹೋದರರಾದ ಶ್ರೀಚಂದ್ ಮತ್ತು ಗೋಪಿ ಲಂಡನ್ ನಲ್ಲಿದ್ದು, ಪ್ರಕಾಶ್ ಜಿನಿವಾದಲ್ಲಿದ್ದಾರೆ. ಮತ್ತೊಬ್ಬ ಸಹೋದರ ಅಶೋಕ ಮುಂಬಯಿಯಲ್ಲಿದ್ದಾರೆ. ಮುಂಬಯಿಲ್ಲಿರುವ ಅಶೋಕ್ ಲೈಲ್ಯಾಂಡ್ ಕಂಪನಿಯ ಆದಾಯವೂ ಕೂಡ ಗಣನೀಯವಾಗಿ ಏರಿಕೆ ಕಂಡಿದೆ.
ಏಷಿಯನ್ ಮೀಡಿಯಾ ಮತ್ತು ಮಾರ್ಕೆಟಿಂಗ್ ಗ್ರೂಪ್ ಆಯೋಜಿಸಿದ್ದ 20ನೇ ಪ್ರಶಸ್ಕಿ ಪ್ರಧಾನ ಕಾರ್ಯಕ್ರಮದಲ್ಲಿ ಲಂಡನ್ ಮೇಯರ್ ಸಿದ್ದಿಖ್ ಖಾನ್ ಭಾಗವಹಿಸಿದ್ದರು.
Advertisement