ಭಾರತೀಯನ ಮೇಲೆ ಹಲ್ಲೆ, ಅಮೆರಿಕ ವ್ಯಕ್ತಿ ವಿರುದ್ಧ ಕೇಸ್ ದಾಖಲು

ಟೆಕ್ಕಿ ಶ್ರೀನಿವಾಸ್ ಹತ್ಯೆ ಪ್ರಕರಣ ಮಾಸುವ ಮುನ್ನವೆ ಮುಸ್ಲಿಂ ಜನಾಂಗದವರು ಎಂದು ತಪ್ಪಾಗಿ ಅರ್ಥೈಸಿಕೊಂಡು...
ಜೆಫ್ರೆ ಅರೆನ್ ಬರ್ಗಿಸ್
ಜೆಫ್ರೆ ಅರೆನ್ ಬರ್ಗಿಸ್
ವಾಷಿಂಗ್ಟನ್: ಟೆಕ್ಕಿ ಶ್ರೀನಿವಾಸ್ ಹತ್ಯೆ ಪ್ರಕರಣ ಮಾಸುವ ಮುನ್ನವೆ ಮುಸ್ಲಿಂ ಜನಾಂಗದವರು ಎಂದು ತಪ್ಪಾಗಿ ಅರ್ಥೈಸಿಕೊಂಡು ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಜನಾಂಗೀಯ ಹಲ್ಲೆ ನಡೆಸಿದ್ದ ಅಮೆರಿಕಾ ಪ್ರಜೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇತ್ತೀಚೆಗಷ್ಟೇ ಕನ್ಸಾಸ್ ನಲ್ಲಿ ಭಾರತೀಯ ಮೂಲದ ಟೆಕ್ಕಿ ಶ್ರೀನಿವಾಸ್ ನನ್ನು ದುಷ್ಕರ್ಮಿಯೊಬ್ಬ ಮುಸ್ಲಿಮನೆಂದು ತಪ್ಪಾಗಿ ಅರ್ಥೈಸಿ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಇದರ ಬೆನ್ನಲ್ಲೇ ಈಗ ಭಾರತದ ಅಂಕುರ್ ಮೆಹ್ತಾ ಎಂಬುವವರ ಮೇಲೆ ಅಮೆರಿಕದ 54 ವರ್ಷದ ಜೆಫ್ರೆ ಅರೆನ್ ಬರ್ಗಿಸ್ ಎಂಬಾತ ಜನಾಂಗೀಯ ನಿಂದನೆ ಹಾಗೂ ಹಲ್ಲೆ ನಡೆಸಿದ್ದಾನೆ.
ಮೆಹ್ತಾ ಅವರು ಪೀಟ್ಸ್ ಬರ್ಗ್ ನ ಸೌತ್ ಹಿಲ್ಸ್ ವಿಲೇಜೇ ನಲ್ಲಿರುವ ರೆಡ್ ರಾಬಿನ್ ರೆಸ್ಟೋರೆಂಟ್ ನಲ್ಲಿ ಕುಳಿತಿದ್ದಾಗ ಬರ್ಗಿಸ್ ಮೆಹ್ತಾ ಮೇಲೆ ಹಲ್ಲೆ ಮಾಡಿದ್ದು, ಮೆಹ್ತಾ ಅವರು ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದು ಏಷ್ಯಾ ಮೂಲದ ಜನಾಂಗೀಯ ಮುಖ ಚಹರೆ ಹೊಂದಿರುವುದರಿಂದ ಬರ್ಗಿಸ್, ಮೆಹ್ತಾ ಅವರನ್ನು ಮುಸ್ಲಿಂ ಎಂದು ತಪ್ಪಾಗಿ ಅರ್ಥೈಸಿದ್ದಾನೆಂದು ಹೇಳಲಾಗಿದೆ.
ರೆಡ್ ರಾಬಿನ್ ರೆಸ್ಟೋರೆಂಟ್ ನಲ್ಲಿ ಭಾರತೀಯ ಪ್ರಜೆ ಮೇಲೆ ಜನಾಂಗೀಯ ಹಲ್ಲೆ ನಡೆಸಿದ ಆರೋಪದ ಮೇಲೆ ಬರ್ಗಿಸ್ ವಿರದ್ಧ ಫೆಡರಲ್ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ರೆಸ್ಟೋರೆಂಟ್ ನಲ್ಲಿ ಮೆಹ್ತಾ ಅವರ ಮುಂದೆ ಕುಳಿತಿದ್ದ ಬರ್ಗಿಸ್ ಭಾರತೀಯ ಪ್ರಜೆಯನ್ನು ನಿಂದಿಸಿದ್ದಲದೆ ಮೊಣಕೈಯಿಂದ ತಲೆಗೆ ಹೊಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com