ಲಂಡನ್ ದಾಳಿಯ ಭಯೋತ್ಪಾದಕನ ಬಗ್ಗೆ ಗುಪ್ತಚರ ಇಲಾಖೆಗೆ ತಿಳಿದಿತ್ತು: ಬ್ರಿಟನ್ ಪ್ರಧಾನಿ ಥೆರೇಸಾ ಮೇ

ಬ್ರಿಟನ್ ಸಂಸತ್ ಮೇಲೆ ದಾಳಿ ನಡೆಸಿದ್ದರ ಹಿಂದಿರುವ ಒಂಟಿ ಉಗ್ರ ದಾಳಿ ನಡೆಸುವ ಭಯೋತ್ಪಾದಕನ ಬಗ್ಗೆ ದಾಳಿ ನಡೆಯುವುದಕ್ಕೂ ಮುನ್ನವೇ ಗುಪ್ತಚರ ಇಲಾಖೆಗೆ ಮಾಹಿತಿ ಇತ್ತು...
ಲಂಡನ್ ದಾಳಿಯ ಭಯೋತ್ಪಾದಕನ ಬಗ್ಗೆ ಗುಪ್ತಚರ ಇಲಾಖೆಗೆ ತಿಳಿದಿತ್ತು: ಬ್ರಿಟನ್ ಪ್ರಧಾನಿ ಥೆರೇಸಾ ಮೇ
ಲಂಡನ್: ಬ್ರಿಟನ್ ಸಂಸತ್ ಮೇಲೆ ದಾಳಿ ನಡೆಸಿದ್ದರ ಹಿಂದಿರುವ ಒಂಟಿ ಉಗ್ರ ದಾಳಿ ನಡೆಸುವ ಭಯೋತ್ಪಾದಕನ ಬಗ್ಗೆ ದಾಳಿ ನಡೆಯುವುದಕ್ಕೂ ಮುನ್ನವೇ ಗುಪ್ತಚರ ಇಲಾಖೆಗೆ ಮಾಹಿತಿ ಇತ್ತು ಎಂದು ಬ್ರಿಟನ್ ಪ್ರಧಾನಿ ಥೆರೇಸಾ ಮೇ ಹೇಳಿದ್ದಾರೆ. 
ಭಯೋತ್ಪಾದಕ ದಾಳಿ ನಡೆದ ನಂತರ ಸಂಸತ್ ನ ಹೌಸ್ ಆಫ್ ಕಾಮನ್ಸ್ ನಲ್ಲಿ ಮಾತನಾಡಿರುವ ಪ್ರಧಾನಿ ಥೆರೇಸಾ ಮೇ, ಬ್ರಿಟನ್ ಭಯೋತ್ಪಾದಕ ದಾಳಿಗಳಿಗೆ ಹೆದರುವುದಿಲ್ಲ ಎಂಬ ಸಂದೇಶವನ್ನು ಭಯೋತ್ಪಾದಕರಿಗೆ ರವಾನೆ ಮಾಡಿದ್ದಾರೆ. ಬ್ರಿಟನ್ ಸಂಸತ್ ಮೇಲಿನ ದಾಳಿಯಲ್ಲಿ ಒಂಟಿ ಭಯೋತ್ಪಾದಕ ದಾಳಿ ನಡೆದಿದ್ದು ಬ್ರಿಟನ್ ನಲ್ಲೇ ಹುಟ್ಟಿದ ಪ್ರಜೆಯಾಗಿದ್ದಾನೆ ಹಾಗೂ ಇಸ್ಲಾಮಿಕ್ ಭಯೋತ್ಪಾದನೆಯಿಂದ  ಎಂದು ಹೇಳಲಾಗುತ್ತಿದೆ. ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ 8 ಜನರನ್ನು ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಸದನಕ್ಕೆ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com