ಢಾಕಾ: ಢಾಕಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದಿದ್ದ ಆತ್ಮಹತ್ಯಾದಾಳಿಗೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿದೆ.
ಉಗ್ರ ಸಂಘಟನೆಯ ಮುಖವಾಣಿ ಪತ್ರಿಕೆಯೊಂದು ಆತ್ಮಹತ್ಯಾದಾಳಿಗೆ ಹೊಣೆ ಹೊತ್ತಿರುವುದರ ಬಗ್ಗೆ ಟ್ವಿಟರ್ ಮೂಲಕ ಬಾಂಗ್ಲಾ ದೇಶದ ಎಸ್ಐಟಿಇ ಮಾಹಿತಿ ನೀಡಿದ್ದು, ಒಂದೇ ವಾರದಲ್ಲಿ ಎರಡನೇ ಬಾರಿಗೆ ಇಸೀಸ್ ಉಗ್ರ ಸಂಘಟನೆ ಭಯೋತ್ಪಾದಕ ದಾಳಿಗೆ ಹೊಣೆ ಹೊತ್ತಿದೆ ಎಂದು ಹೇಳಿದೆ.
ಉತ್ತರ ಢಾಕಾದ ವಿಮಾನ ನಿಲ್ದಾಣ ರಸ್ತೆಯ ಪೊಲೀಸ್ ಚೌಕಿಯ ಬಳಿ ಆತ್ಮಹತ್ಯಾ ಬಾಂಬ್ ದಾಳಿ ಭಯೋತ್ಪಾದಕರು ಆತ್ಮಹತ್ಯಾದಾಳಿ ನಡೆಸಿದ್ದರು. ಪೊಲೀಸ್ ಅಧಿಕಾರಿಗಳು ದಾಳಿಯನ್ನು ಆತ್ಮಹತ್ಯಾ ದಾಳಿ ಎಂದೇ ಶಂಕಿಸಿದ್ದರು. ಅದರಂತೆಯೇ ಈಗ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಭಯೋತ್ಪಾದನೆಗೆ ಹೊಣೆ ಹೊತ್ತುಕೊಂಡಿದೆ.