ಗಿಲ್ಗಿಟ್-ಬಾಲ್ಟಿಸ್ತಾನ್ ವಿಷಯವಾಗಿ ಪಾಕಿಸ್ತಾನವನ್ನು ಖಂಡಿಸಿದ ಬ್ರಿಟನ್ ಸಂಸತ್

ಗಿಲ್ಗಿಟ್-ಬಾಲ್ಟಿಸ್ತಾನ್ ನ್ನು ತನ್ನ ಐದನೇ ಗಡಿನಾಡು ಎಂದು ಘೋಷಿಸಿಕೊಂಡಿರುವ ಪಾಕಿಸ್ತಾನದ ಕ್ರಮವನ್ನು ಬ್ರಿಟನ್ ಸಂಸತ್ ಖಂಡಿಸಿದ್ದು, ಪಾಕಿಸ್ತಾನದ ವಿರುದ್ಧ ನಿರ್ಣಯವನ್ನೂ ಅಂಗೀಕರಿಸಿದೆ.
ಬ್ರಿಟನ್ ಸಂಸತ್
ಬ್ರಿಟನ್ ಸಂಸತ್
ಲಂಡನ್: ಗಿಲ್ಗಿಟ್-ಬಾಲ್ಟಿಸ್ತಾನ್ ನ್ನು ತನ್ನ ಐದನೇ ಗಡಿನಾಡು ಎಂದು ಘೋಷಿಸಿಕೊಂಡಿರುವ ಪಾಕಿಸ್ತಾನದ ಕ್ರಮವನ್ನು ಬ್ರಿಟನ್ ಸಂಸತ್ ಖಂಡಿಸಿದ್ದು, ಪಾಕಿಸ್ತಾನದ ವಿರುದ್ಧ ನಿರ್ಣಯವನ್ನೂ ಅಂಗೀಕರಿಸಿದೆ. 
ಸಂಸತ್ ನಲ್ಲಿ ಮಂಡಿಸಲಾದ ನಿರ್ಣಯದಲ್ಲಿ ಗಿಲ್ಗಿಟ್- ಬಾಲ್ಟಿಸ್ತಾನ್ ನ್ನು ಜಮ್ಮು-ಕಾಶ್ಮೀರದ ಕಾನೂನಾತ್ಮಕ-ಸಂವಿಧಾನಾತ್ಮಕ ಭಾಗ ಎಂದು ಬ್ರಿಟನ್ ಹೇಳಿದ್ದು, 1947 ರಲ್ಲಿ ಪಾಕಿಸ್ತಾನ ಅಕ್ರಮವಾಗಿ ಅತಿಕ್ರಮಿಸಿದೆ ಎಂದು ಹೇಳಿದೆ. ಭಾರತದ ಅವಿಭಾಜ್ಯ ಪ್ರದೇಶವನ್ನು ಪಾಕಿಸ್ತಾನ ಆಕ್ರಮಣ ಮಾಡಿದ್ದು ಅಲ್ಲಿನ ಜನರಿಗೆ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಮಾ.23 ರಂದು ಮಂಡಿಸಲಾಗಿರುವ ಈ ನಿರ್ಣಯದಲ್ಲಿ ಬ್ರಿಟನ್ ಹೇಳಿದೆ.  ಬ್ರಿಟನ್ ನ ಲೇಬರ್ ಪಕ್ಷದ ಮುಖಂಡ ಬಾಬ್ ಬ್ಲಾಕ್ಮನ್ ನಿರ್ಣಯವನ್ನು ಮಂಡಿಸಿದ್ದು, ಭಾರತದ ಪ್ರದೇಶವನ್ನು ಕಸಿದುಕೊಳ್ಳುವುದೂ ಅಲ್ಲದೇ ಪಾಕಿಸ್ತಾನ ಅಲ್ಲಿನ ಸ್ಥಳೀಯ ಜನಸಂಖ್ಯೆಯನ್ನೂ ಬದಲಾವಣೆ ಮಾಡಿದೆ. ಜೊತೆಗೆ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ನ ಒತ್ತಾಯಪೂರ್ವಕ ನಿರ್ಮಾಣ ವಿವಾದಿತ ಪ್ರದೇಶದಲ್ಲಿ ಮತ್ತಷ್ಟು ಸಮಸ್ಯೆ ಉಂಟು ಮಾಡಿದೆ ಎಂದು ಬ್ರಿಟನ್ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com