ಸಿಪಿಇಸಿ: ಚೀನಾ ವಿರುದ್ಧ ಪಾಕಿಸ್ತಾನದ ಕಾನೂನು, ಸಾಮಾಜಿಕ ಸ೦ಪ್ರದಾಯ ಉಲ್ಲಂಘನೆ ಆರೋಪ

ಚೀನಾ ಕಂಪನಿಗಳ ವಿರುದ್ಧ ಪಾಕಿಸ್ತಾನದ ಸ್ಥಳೀಯ ಕಾನೂನು ಹಾಗೂ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿರುವ ಆರೋಪ ಕೇಳಿಬಂದಿದೆ.
ಸಿಪಿಇಸಿ
ಸಿಪಿಇಸಿ
ಬೀಜಿಂಗ್: ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಚೀನಾ-ಪಾಕಿಸ್ತಾನದ ನಡುವೆ ಒಂದಲ್ಲಾ ಒಂದು ವಿಚಾರವಾಗಿ ಸಮಸ್ಯೆ ಉಂಟಾಗುತ್ತಿದ್ದು, ಈಗ ಚೀನಾ ಕಂಪನಿಗಳ ವಿರುದ್ಧ ಪಾಕಿಸ್ತಾನದ ಸ್ಥಳೀಯ ಕಾನೂನು ಹಾಗೂ ಸಾಮಾಜಿಕ ಸ೦ಪ್ರದಾಯಗಳನ್ನು ಮೀರಿರುವ ಆರೋಪ ಕೇಳಿಬಂದಿದೆ. 
ಸಿಪಿಇಸಿ ಯೋಜನೆ ಬಗ್ಗೆ ಲೇಖನ ಪ್ರಕಟಿಸಿರುವ ಚೀನಾದ ಪತ್ರಿಕೆಯಲ್ಲಿ ಈ ಅರೋಪ ಕೇಳಿಬಂದಿದ್ದು, ಚೀನಾ ಸಂಸ್ಥೆಗಳು ಪಾಕಿಸ್ತಾನದ ಸ್ಥಳೀಯ ಕಾನೂನು ಹಾಗೂ ಸಾಮಾಜಿಕ ಸ೦ಪ್ರದಾಯಗಳನ್ನು  ಉಲ್ಲಂಘನೆ ಮಾಡಿದ್ದು, ಚೀನಾದ ಖ್ಯಾತಿಗೆ ಧಕ್ಕೆ ಉಂಟು ಮಾಡಿವೆ ಎಂದು ಹೇಳಿದೆ. 
ಚೀನಾದ ಬೆಲ್ಟ್ ಆಂಡ್ ರೋಡ್ ಯೋಜನೆಗೆ ಸಿಪಿಇಸಿ ಪ್ರಮುಖ ಪಾತ್ರ ವಹಿಸಲಿದೆ. ಸಹಕಾರ, ಇಂಧನ, ಸಾರಿಗೆ ಮೂಲ;ಸೌಕರ್ಯ, ಕೈಗಾರಿಕಾ ಸಹಕಾರ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಿಪಿಇಸಿ ಯೋಜನೆ ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದೆ. ಆದರೆ ಪಾಕಿಸ್ತಾನದ ಕೆಲವು ರಾಜಕಾರಣಿಗಳ ವೈಯಕ್ತಿಕ ಹಿತಾಸಕ್ತಿ ಹಾಗೂ ಚೀನಾದ ಕೆಲವು ಸಂಸ್ಥೆಗಳ ವೈಯಕ್ತಿಕ ಹಿತಾಸಕ್ತಿಯಿಂದಾಗಿ ಚೀನಾ ಕಂಪನಿಗಳು ಪಾಕಿಸ್ತಾನದ ಸ್ಥಳೀಯ ಹಾಗೂ ಸಾಮಾಜಿಕ ಸ೦ಪ್ರದಾಯಗಳನ್ನು  ಮೀರಿವೆ. ಇದು ಚೀನಾದ ಖ್ಯಾತಿಗೆ ಧಕ್ಕೆ ಉಂಟು ಮಾಡುವಂತಿವೆ ಎಂದು ಚೀನಾ ಪತ್ರಿಕೆ ಲೇಖನದಲ್ಲಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com