ಪಾಕ್ ಸೇನೆ, ಐಎಸ್ಐ ಸಿಂಧ್ ಪ್ರಾಂತ್ಯವನ್ನು ನಾಗರಿಕ ಯುದ್ಧದತ್ತ ತಳ್ಳುತ್ತಿದೆ: ಅಲ್ತಾಫ್ ಹುಸೇನ್

ಪಾಕಿಸ್ತಾನ ಸೇನೆ ಹಾಗೂ ಐಎಸ್ಐ ಸಿಂಧ್ ಪ್ರಾಂತ್ಯವನ್ನು ನಾಗರಿಕ ಯುದ್ಧ (ಅಂತರ್ಯುದ್ಧದತ್ತ) ತಳ್ಳುತ್ತಿದೆ ಎಂದು ಮುತ್ತಾಹಿದಾ ಖ್ವಾಮಿ ಚಳವಳಿ ಪಕ್ಷದ ಮುಖಂಡ ಅಲ್ತಾಫ್ ಹುಸೇನ್ ಆರೋಪಿಸಿದ್ದಾರೆ.
ಅಲ್ತಾಫ್ ಹುಸೇನ್
ಅಲ್ತಾಫ್ ಹುಸೇನ್
ವಾಷಿಂಗ್ ಟನ್: ಪಾಕಿಸ್ತಾನ ಸೇನೆ ಹಾಗೂ ಐಎಸ್ಐ (ಪಾಕ್ ಗುಪ್ತಚರ ಇಲಾಖೆ) ಸಿಂಧ್ ಪ್ರಾಂತ್ಯವನ್ನು ನಾಗರಿಕ ಯುದ್ಧ (ಅಂತರ್ಯುದ್ಧದತ್ತ) ತಳ್ಳುತ್ತಿದೆ ಎಂದು ಮುತ್ತಾಹಿದಾ ಖ್ವಾಮಿ ಚಳವಳಿ ಪಕ್ಷದ ಮುಖಂಡ ಅಲ್ತಾಫ್ ಹುಸೇನ್ ಆರೋಪಿಸಿದ್ದಾರೆ. 
ಅಲ್ತಾಫ್ ಹುಸೇನ್ ಆರೋಪದ ಮೂಲಕ ಪಾಕಿಸ್ತಾನದ ವಿರುದ್ಧ ಅಲ್ಲಿನ ಪ್ರಾಂತ್ಯದವರೇ ತಿರುಗಿಬಿದ್ದಿರುವುದು ಮತ್ತೊಮ್ಮೆ ಸಾಬೀತಾಗಿದೆ. ಪಾಕಿಸ್ತಾನ ಸೇನೆ, ಐಎಸ್ಐ ಸಿಂಧ್ ಪ್ರಾಂತ್ಯವನ್ನು ನಾಗರಿಕ ಯುದ್ಧದತ್ತ ತಳ್ಳುತ್ತಿದ್ದು ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ. 
ಸಿಂಧ್, ಬಲೂಚಿಸ್ತಾನ ಖೈಬರ್ ಪಖ್ತೂಂಖ್ವ ಸೇರಿದಂತೆ ಸಂಪೂರ್ಣ ಪಾಕಿಸ್ತಾವನ್ನು ಪಾಕಿಸ್ತಾನ ಸೇನೆ ಹಾಗೂ ಐಎಸ್ಐ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಸಾವಿರಾರು ಮೊಹ್ಜೀರ್ ಬಲೂಚ್ ಗಳು ಹಾಗೂ ಪಶ್ತೂನ್ ಗಳನ್ನು ಹತ್ಯೆ ಮಾಡಿವೆ ಎಂದು ಅಲ್ತಾಫ್ ಹುಸೇನ್ ಆರೋಪಿಸಿದ್ದಾರೆ. 
ಒಸಾಮ ಬಿನ್ ಲ್ಯಾಡನ್, ಮುಲ್ಲಾ ಓಮರ್ ಹಾಗೂ ಮುಲ್ಲಾ ಅಕ್ತೆರ್ ಮನ್ಸೂರ್ ನಂತಹ ಮೋಸ್ಟ್ ವಾಂಟೆಡ್ ಭಯೋತ್ಪಾದಕರಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿದೆ ಎಂಬುದು ಈಗ ಅಂತಾರಾಷ್ಟ್ರೀಯ ಸಮುದಾಯಕ್ಕೆ ಅರ್ಥವಾಗಿದೆ, ಈಗ ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಸಮುದಾಯ  ಮೊಹ್ಜೀರ್ ಬಲೂಚ್ ಗಳು ಹಾಗೂ ಪಶ್ತೂನ್ ಗಳ ಹತ್ಯೆಯನ್ನು ತಡೆಗಟ್ಟಲು ಮುಂದಾಗಬೇಕು ಎಂದು ಅಲ್ತಾಫ್ ಹುಸೇನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com